ಧಾರವಾಡ - ಹುಬ್ಬಳ್ಳಿ

ವಿದ್ಯಾಗಿರಿ ಶಾಲೆಯಲ್ಲಿ ಸಂಭ್ರಮದ ದೀಪಾವಳಿ ಆಚರಣೆ

ವಿದ್ಯಾಗಿರಿ ಶಾಲೆಯಲ್ಲಿ ಸಂಭ್ರಮದ ದೀಪಾವಳಿ ಆಚರಣೆ

ಲೋಕದರ್ಶನ ವರದಿ 

         ಧಾರವಾಡ 07 : ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕನ್ನು ಜೀವನದಲ್ಲಿ ತರುವಂತಹ ಸಂಕೇತವಾಗಿರುವ ಬೆಳಕಿನ ಹಬ್ಬ ದೀಪಾವಳಿ ಪ್ರತಿಯೊಬ್ಬರಲ್ಲೂ ಪ್ರೀತಿ ಸೌಹಾರ್ದತೆ ಮತ್ತು ಧನಾತ್ಮಕ ಚಿಂತನೆಗಳನ್ನು ಮನಗಳಲ್ಲಿ ತುಂಬವ ಈ ದೀಪಾವಳಿಯನ್ನು ಧಾರವಾಡದ ವಿದ್ಯಾಗಿರಿಯ ಜೆ,ಎಸ್,ಎಸ್,ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯವರು ಸಂಭ್ರಮದಿಂದ ಆಚರಿಸಿದರು.

            ಜನತಾ ಶಿಕ್ಷಣ ಸಮಿತಿಯ ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದರವರು ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾಧ್ಯೆಯವರು, ಕೇಂದ್ರಿಯ ಶಾಲೆಯ ಪ್ರಾಚಾರ್ಯರಾದ ರಜನಿ ಪಾಟೀಲ, ಆಂಗ್ಲ ಮಾಧ್ಯಮ ಶಾಲೆಯ ಡಯಾನಾ ಮೈನಾ ದಿವಟೆ ಹಾಗೂ ಶಾಲಾ ಮುಖ್ಯೋಪಾಧ್ಯಾಯನಿಯರಾದ ಪಿ, ಎಸ್ ಸುಧಾಮಣಿ ಶಾಲಾ ಸಿಬ್ಬಂದಿಯವರು ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ