ಧಾರವಾಡ - ಹುಬ್ಬಳ್ಳಿ

ಬಸ್ ಚಾರ್ಜ-ಹಾಲಿನ ದರ ಹೆಚ್ಚಳ ಬಡವರ ಪಾಲಿಗೆ ದೀಪಾವಳಿ ಕತ್ತಲ

ಬಸ್ ಚಾರ್ಜ-ಹಾಲಿನ ದರ ಹೆಚ್ಚಳ ಬಡವರ ಪಾಲಿಗೆ ದೀಪಾವಳಿ ಕತ್ತಲ

ಲೋಕದರ್ಶನ ವರದಿ 

         ಧಾರವಾಡ 07: ರಾಜ್ಯದ ಕಾಂಗ್ರೆಸ್ ಸರಕಾರ ಏಕಾಏಕಿ ಬಸ್ ಪ್ರಯಾಣ ದರ ಹಾಗೂ ನಂದಿನಿ ಹಾಲಿನ ದರವನ್ನು ಅತಿಯಾಗಿ ಹೆಚ್ಚಳ ಮಾಡಿದ್ದು, ಇದು ಬಡವರ ದೀಪಾವಳಿ ಹಬ್ಬದ ಸಂಭ್ರಮವನ್ನು ಕಸಿದುಕೊಂಡು ಅವರು ಕತ್ತಲನ್ನು ಅನುಭವಿಸುವಂತಾಗಿದೆ ಎಂದು ತಾಲೂಕಿನ ಅಮ್ಮಿನಬಾವಿ ಗ್ರಾಮದ ಆಝಾದ್ ಯುವಕ ಮಂಡಳದ ಮಾಜಿ ಅಧ್ಯಕ್ಷ ಪ್ರಕಾಶ ಕರ್ಕಿ ಹೇಳಿದ್ದಾರೆ. 

     ಮತದಾರರನ್ನು ತನ್ನತ್ತ ಸೆಳೆದುಕೊಳ್ಳಲು ಒಮ್ಮೆಲೇ ಪಂಚಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ರಾಜ್ಯದ ಖಜಾನೆ ಖಾಲಿಯಾಗಿದ್ದು, ಈ ಕೊರತೆಯನ್ನು ತುಂಬಿಕೊಳ್ಳಲು ರಾಜ್ಯ ಸರಕಾರ ಜನರ ಜೇಬಿಗೆ ಕೈಹಾಕಿದೆ.

          ಪ್ರಸ್ತುತ ಹಾಲಿನ ದರವನ್ನು ಪ್ರತೀ ಲೀಟರ್‌ಗೆ 8 ರೂ. ಹಾಗೂ ಬಸ್‌ಪ್ರಯಾಣ ದರವನ್ನು ಶೇಕಡಾ 25 ರಷ್ಟು ಹೆಚ್ಚಳ ಮಾಡಿದೆ. ಇದರಿಂದ ಧಾರವಾಡ-ಅಮ್ಮಿನಬಾವಿ ನಡುವಿನ 11 ಕಿ.ಮೀ. ಅಂತರದ ಪ್ರಯಾಣದರ 20 ರೂ. ಇದ್ದದ್ದು ಈಗ 25 ರೂ. ಆಗಿರುವುದು ಬಡವರಿಗೆ ವ್ಯಾಪಕ ಹೊರೆಯಾಗಿದೆ ಎಂದಿದ್ದಾರೆ. 

           ಹೆಣ್ಣುಮಕ್ಕಳನ್ನು ಹೊರತುಪಡಿಸಿದರೆ ನಿತ್ಯವೂ ಅಮ್ಮಿನಬಾವಿ ಗ್ರಾಮದಿಂದ ಹುಬ್ಬಳ್ಳಿ-ಧಾರವಾಡಕ್ಕೆ ನೂರಾರು ಸಂಖ್ಯೆಯ ಕಟ್ಟಡ ಕಾರ್ಮಿಕರೂ ಸೇರಿದಂತೆ ವಿವಿಧ ಕ್ಷೇತ್ರಗಳ ದಿನಗೂಲಿ ಕೆಲಸಗಾರರು ದರ ಏರಿಕೆಯಿಂದ ಹಿಂಸೆ ಅನುಭವಿಸುತ್ತಿದ್ದು, ಕೂಡಲೇ ಸರಕಾರ ಬಸ್ ಪ್ರಯಾಣ ದರ ಹಾಗೂ ಹಾಲಿನ ದರವನ್ನು ಇಳಿಕೆ ಮಾಡಬೇಕೆಂದು ಪ್ರಕಾಶ ಕರ್ಕಿ ಒತ್ತಾಯಿಸಿದ್ದಾರೆ. 


ಸುದ್ದಿ ಓದಿ