ಇಂಡಿ

ಪರವನಿಗೆ ಇಲ್ಲದೆ ಮಣ್ಣು ಸಾಗಾಟ: ಅಧಿಕಾರಿಗಳಿಂದ ಪರೀಶೀಲನೆ

ಪರವನಿಗೆ ಇಲ್ಲದೆ ಮಣ್ಣು ಸಾಗಾಟ: ಅಧಿಕಾರಿಗಳಿಂದ ಪರೀಶೀಲನೆ

ಇಂಡಿ: ಪಟ್ಟಣದ ಅಗರಖೇಡ ರಸ್ತೆಯಲ್ಲಿ ಮಣ್ಣು ತುಂಬಿಕೊಂಡು ಇಂಡಿ ಕಡೆಗೆ ಬರುತ್ತಿದ್ದ ಒಂದು ಮಣ್ಣು ತುಂಬಿದ ಹೈವಾ ವಾಹನವನ್ನು ತಡೆದು ಗಣಿ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿ ಹಫೀಜ್ ಶೇಖ್ ಪರೀಶೀಲಿಸಿದ ವೇಳೆ ಪರವನಿಗೆ ಇಲ್ಲದೆ ಮಣ್ಣು ಸಾಗಾಟ ಮಾಡಿದ್ದು ಕಂಡು ಬಂದು ಸ್ಥಳದಲ್ಲೇ ವಾಹನ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ. 

ಈ ವೇಳೆ ಈ ಭಾಗದಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಣ್ಣು ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದ ಅಧಿಕಾರಿ, ರೈತರು ತಮ್ಮ ಜಮೀನಿನಲ್ಲಿನ ಮಣ್ಣು ಮಾರಾಟ ಮಾಡಲು ಸಹ ನಮ್ಮ ಇಲಾಖೆಯ ಪರವಾನಿಗೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ವಾಹನ ಮಾಲೀಕರು ಮಣ್ಣು ಸಾಗಾಟ ಮಾಡಲು ಸಹ ನಮ್ಮ ಇಲಾಕೆಯ ಪರವಾನಿಗೆ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ. ಅಕ್ರಮ ಮಣ್ಣು ಸಾಗಾಟ ಕಂಡು ಬಂದರೆ ಅಂತಹ ವಾಹನಗಳ ಮಾಲೀಕರ ವಿರುಧ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. 


ಸುದ್ದಿ ಓದಿ