ಅಂತರರಾಷ್ಟ್ರೀಯ

ಉಗ್ರ ಚಟುವಟಿಕೆಗಳ ವಿರುದ್ಧ ಹೋರಾಟದಲ್ಲಿ ದ್ವಂದ್ವ ನೀತಿ ಹೊಂದಿರಬಾರದು: ಶೆಹಬಾಜ್ ಷರೀಫ್, ಕ್ಸಿ ಜಿನ್ಪಿಂಗ್ ಮುಂದೆ ಮೋದಿ ಹೇಳಿಕೆ

ಉಗ್ರ ಚಟುವಟಿಕೆಗಳ ವಿರುದ್ಧ ಹೋರಾಟದಲ್ಲಿ ದ್ವಂದ್ವ ನೀತಿ ಹೊಂದಿರಬಾರದು: ಶೆಹಬಾಜ್ ಷರೀಫ್, ಕ್ಸಿ ಜಿನ್ಪಿಂಗ್ ಮುಂದೆ ಮೋದಿ ಹೇಳಿಕೆ

ನವದೆಹಲಿ 04: ಗಡಿಯಾಚೆಗಿನ ಭಯೋತ್ಪಾದನೆಯನ್ನು 'ನೀತಿ ಸಾಧನ'ಗಳಾಗಿ ಬಳಸುವ ದೇಶಗಳನ್ನು ಖಂಡಿಸಲು ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ರಾಷ್ಟ್ರಗಳು ಹಿಂಜರಿಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. 23ನೇ SCO ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಯೋತ್ಪಾದಕ ಚಟುವಟಿಕೆಗಳನ್ನು ಎದುರಿಸುವಲ್ಲಿ ಯಾವುದೇ ದ್ವಂದ್ವ ಇರಬಾರದು ಎಂದು ಹೇಳಿದರು.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾಗಿಯಾಗಿದ್ದ ಎಸ್ಸಿಒ ವಚರ್ುವಲ್ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವವರ ವಿರುದ್ಧ ನಿಣರ್ಾಯಕ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. 

ಭಾರತದ ಅಧ್ಯಕ್ಷತೆಯಲ್ಲಿ ನಡೆದ ವಚರ್ುವಲ್ ಶೃಂಗಸಭೆಯಲ್ಲಿ ಕಝಾಕಿಸ್ತಾನ್, ಕಿಗರ್ಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಇರಾನ್ ನಾಯಕರು ಸಹ ಭಾಗವಹಿಸಿದ್ದರು.

 

ಸುದ್ದಿ ಓದಿ