ಇಂಡಿ

ಕಿತ್ತೂರಿನ ರಾಣಿ ಚನ್ನಮ್ಮನವರ ಸಾಹಸ ತಿಯೊಬ್ಬ ಮಹಿಳೆಗೂ ಆದರ್ಶ: ರಾಮಚಂದ್ರ ಗಡದೆ

ಕಿತ್ತೂರಿನ ರಾಣಿ ಚನ್ನಮ್ಮನವರ  ಸಾಹಸ ತಿಯೊಬ್ಬ ಮಹಿಳೆಗೂ ಆದರ್ಶ: ರಾಮಚಂದ್ರ ಗಡದೆ

ಇಂಡಿ: ದೇಶದ ಸ್ವಾತಂತ್ರ್ಯೆಕ್ಕಾಗಿ ಬ್ರಿಟಿಷರ ವಿರುಧ್ಧ ಹೋರಾಡಿದ ಕಿತ್ತೂರಿನ ರಾಣಿ ಚನ್ನಮ್ಮನವರ ಬಗ್ಗೆ ಹೊಸ ತಲೆಮಾರಿನ ಮಕ್ಕಳು ಅರಿತುಕೊಳ್ಳಬೇಕು. ಅವರ ಧೈರ್ಯ ಸಾಹಸ ಇಂದು ಪ್ರತಿಯೊಬ್ಬ ಮಹಿಳೆಗೂ ಆದರ್ಶ ಎಂದು ಕಂದಾಯ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಹೇಳಿದರು.

ತಾಲೂಕಾಡಳಿತ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಭಾನುವಾರ ವೀರರಾಣಿ ಕಿತ್ತೂರು ಚನ್ನಮ್ಮನವರ 244 ನೇ ವಿಜಯೋತ್ಸವ ಹಾಗೂ 199 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ರಾಣಿಚನ್ನಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ರಾಣಿ ಚನ್ನಮ್ಮನವರ ಕೆಚ್ಚೆದೆಯ ಹೋರಾಟ ಎಂದಿಗೂ ಪ್ರಸ್ತುತ. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಬ್ರಿಟಿಷ್ ನಿಲುವಿನ ವಿರುಧ್ಧ ಹೋರಾಟ ನಡೆಸಿದ್ದರು. ಬ್ರಿಟಿಷರ ವಿರುಧ್ಧದ ಹೋರಾಟದಲ್ಲಿ ಗೆದ್ದ ಚೆನ್ನಮ್ಮನವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು ಎಂದು ಪಣತೊಟ್ಟಿದ್ದ ಬ್ರಿಟಿಷರು, ಒಳಸಂಚು ರೂಪಿಸಿ ಚನ್ನಮ್ಮನವರನ್ನು ಬಂಧಿಸಿದರು ಎಂದರು. ಅಂತಹ ಮಹಾನ್ ತಾಯಿ ಜನಿಸಿದ ನಾಡಿನಲ್ಲಿ ನಾವೆಲ್ಲ ಜನಿಸಿದ್ದು ನಮ್ಮಪುಣ್ಯ ಎಂದರು.

ತಹಶೀಲ್ದಾರ ನಾಗಯ್ಯ ಹಿರೇಮಠ ಮಾತನಾಡಿದರು.

ಸಮಾಜದ ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, ಕಿತ್ತೂರುರಾಣಿ ಚನ್ನಮ್ಮನವರು ಮಹಿಳೆಯರಿಗೆ ಆದರ್ಶಪ್ರಾಯರಾಗಿದ್ದು ಅವರ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿಯಬೇಕು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ರೈತಮೋಚರ್ಾ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ,  ಕಿತ್ತೂರು ಚನ್ನಮ್ಮನವರು ದೇಶದ ಸ್ವಾತಂತ್ರ್ಯೆಕ್ಕಾಗಿ ಹೋರಾಡಿದ ಪ್ರಥಮ ಮಹಿಳೆಯಾಗಿದ್ದು ಅವರನ್ನು ಸ್ಮರಿಸುವ ಕಾರ್ಯವಾಗಬೇಕಿದೆ. 1824ರಲ್ಲಿಯೇ ಸ್ವಾತಂತ್ರ್ಯಕಾಗಿ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ ಮೊದಲ ಮಹಿಳಾ ಹೋರಾಟಗಾತರ್ಿ ರಾಣಿಚನ್ನಮ್ಮನವರು.  ಬ್ರಿಟಿಷರ ಸಾಮ್ರಾಜ್ಯದ ವಿರುದ್ಧ ಅನೇಕ ಮಹಿಳೆಯರನ್ನು ಏಳುವಂತೆ ಮಾಡಿದ ದಿಟ್ಟ ಮಹಿಳೆ ಚನ್ನಮ್ಮನವರು ಎಂದರು.

ಈ ಸಂದರ್ಭದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಹೆಚ್. ಬಿರಾದಾರ, ಭೀಮನಗೌಡ ಪಾಟೀಲ, ಸಮಾಜದ ಕಾರ್ಯದಶರ್ಿ ಶಿವಾನಂದ ಚಾಳೀಕಾರ, ಮಂಜುನಾಥ ಕಾಮಗೊಂಡ, ಅನೀಲಗೌಡ ಬಿರಾದಾರ, ಬಾಳು ಮುಳಜಿ, ಉಮೇಶ ಬಳಬಟ್ಟಿ, ಬಸವರಾಜ ರಾವೂರ, ಶಶಿಕಲಾ ಬೇಟಗೆರಿ, ವಿದ್ಯಾಶ್ರೀ ಪಾಟೀಲ್, ಶಶಿಕಲಾ ಆಳೂರ, ವೀಣಾ ದೇವರ್, ಯಲ್ಲಪ್ಪ ಹದರಿ, ಬುದ್ದುಗೌಡ ಪಾಟೀಲ, ಹೊಸಮನಿ ಪಿ.ಎಸ್, ಶರಣು ಬಂಡಿ, ಉಮೇಶ ಲಚ್ಯಾಣ, ಶಿವಾನಂದ ರಾವೂರ, ಶ್ರೀಧರಗೌಡ ಬಿರಾದಾರ, ಭೀಮಾಶಂಕರ ಆಳುರ, ಬಿ.ಜೆ. ಇಂಡಿ, ಸೇರಿದಂತೆ ಮತ್ತಿತರರು ಇದ್ದರು.

 

ಸುದ್ದಿ ಓದಿ