ಇಂಡಿ

ಯೂಟ್ಯೂಬ್ ಚಾಲನಗಳ ಹಾವಳಿ: ಚಾಲನಗಳಿಗೆ ಕಡಿವಾಣ ಹಾಕಲು ಪೊಲೀಸ ಇಲಾಖೆ ಗಂಭೀರ ಚಿಂತನೆ

ಯೂಟ್ಯೂಬ್ ಚಾಲನಗಳ ಹಾವಳಿ: ಚಾಲನಗಳಿಗೆ ಕಡಿವಾಣ ಹಾಕಲು ಪೊಲೀಸ ಇಲಾಖೆ ಗಂಭೀರ ಚಿಂತನೆ

ಇಂಡಿ: ತಾಲೂಕಿನ್ಯಾದಂತ ನಾಯಿ ಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಯುಟ್ಯೂಬ್ ನ್ಯೂಜ್ ಚಾಲನಗಳಿಗೆ ಕಡಿವಾಣ ಹಾಕಲು ಪೋಲಿಸ ಇಲಾಖೆ ಗಂಭೀರ ಚಿಂತನೆ ನಡೆಸಿದೆ.  ಯೂಟ್ಯೂಬ್ ಚಾಲನಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ನಿರಂತರವಾಗಿ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿರುವ ಪೋಲಿಸ್ ಇಲಾಖೆ, ಯೂಟ್ಯೂಬ್ ಚಾನೆಲ್‌ಗಳ ಮಾಹಿತಿ ಸಂಗ್ರಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ.  

ಯೂಟ್ಯೂಬ್ ಚಾನೆಲ್ ಗಳ ಹೆಸರೇಳಿಕೊಂಡು ಹಣಕ್ಕಾಗಿ ಅಧಿಕಾರಿಗಳನ್ನು ಬೆದರಿಸುವದು,ಅನುಮತಿ ಪಡೆಯದೆ ಸರಕಾರಿ ಕಚೇರಿಗಳಿಗೆ ಪ್ರವೇಶಿಸಿ ಚಿತ್ರಿಕರಣ ಮಾಡುವದು,ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಗುರಿಯಾಗಿಸಿಕೊಂಡು ಮಾನಹಾನಿಕರ ವರದಿಗಳನ್ನು ಪ್ರಸಾರ ಮಾಡುವದು ನಡೆಯುತ್ತಿದೆ.   

ನೊಂದಣಿಯಾಗದ ನ್ಯೂಸ್ ಚಾನೆಲ್ ಗಳಿಗೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಪೋಲಿಸ ಇಲಾಖೆ  ಮುಂದಾಗಿದೆ. ಅದರಂತೆ ಅನುಮತಿ ಪಡೆಯದೆ ನಡೆಸುತ್ತಿರುವ ಚಾಲನ್ ಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲು ಸಜ್ಜಾಗಿದೆ ಎಂದು ಪೋಲಿಸ್ ಮೂಲಗಳು ಮಾಹಿತಿ ನೀಡಿವೆ.  

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೂಟ್ಯೂಬ್ ಚಾನೆಲ್ ಗಳ ಮಾಹಿತಿ ಸಂಗ್ರಹಿಸುತ್ತಿರುವ ಪೋಲಿಸರು ಚಾನೆಲ್ ಗಳ ಹೆಸರು, ನಡೆಸುತ್ತಿರುವವರು ಯಾರು, ಯಾರಿಂದ ಅನುಮತಿ ಪಡೆದಿದ್ದಾರೆಯೇ, ಅವರ ಹಿನ್ನೆಲೆ ಹಾಗೂ ಅವರು ಪ್ರಸಾರ ಮಾಡುತ್ತಿರುವ ವಿಷಯಗಳು ಮತ್ತೊಬ್ಬರಿಗೆ ತೊಂದರೆಯಾಗುವ ರೀತಿಯಲ್ಲಿ ಹಾಗೂ ಮಾನಹಾನಿ ಮಾಡುವ ರೀತಿಯಲ್ಲಿ ಇವೆಯೇ ಎಂಬ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾರೆ.  

ಯೂಟ್ಯೂಬ್ ವೇದಿಕೆಯಲ್ಲಿ ಒಂದು ವಿಷಯವನ್ನು ಎಡಿಟ ಮಾಡಿ ಪ್ರಸಾರ ಮಾಡಬೇಕಾದರೆ ಟ್ರೇಡ ಮಾರ್ಕ ನೊಂದಣಿ ಕಡ್ಡಾಯವಾಗಿರುತ್ತದೆ. ಜತೆಗೆ ಯುಟ್ಯೂಬ ನ್ಯೂಜ್ ಚಾನೆಲ್ ನಡೆಸಬೇಕಂದರೆ ನ್ಯೂಜ್ ಚಾನೆಲ್ ಹೆಸರು ಬಳಸಬೇಕಾದರೆ ಪ್ರತಿಯೊಬ್ಬರೂ ಟ್ರೇಡ್ ಮಾರ್ಕ ನೊಂದಣಿ,ಜಿಎಸ್‌ಟಿ ಸಂಖ್ಯೆ ಹಾಗೂ ಲೆಕ್ಕ ಪರಿಶೋಧನೆ ಮಾಡಿಸಬೇಕಾಗುತ್ತದೆ. ನೊಂದಣಿ ಮಾಡದಿದ್ದರೆ ಅಂತಹ ಚಾನೆಲ್ ಗಳನ್ನು ನಕಲಿ ಖಾತೆಗಳು ಎಂದು ಪರಿಗಣಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.  

ಪತ್ರಕರ್ತರು ಎಂದು ಹೇಳಿಕೊಂಡು ಬ್ಲಾಕ್‌ಮೇಲ್ ಮಾಡಿದರೆ ಕೂಡಲೆ ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ ಅಂತಹವರ ವಿರುಧ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಅಧಿಕಾರಿಗಳ ಹೆಸರನ್ನು ಸಹ ಗೌಪ್ಯವಾಗಿಡಲಾಗುತ್ತದೆ ಯೂಟ್ಯೂಬ್ ಚಾನೆಲ್ ಹೆಸರು ಹೇಳಿಕೊಂಡು ಶಾಲಾ ಕಾಲೇಜು, ಗ್ರಾಮ ಪಂಚಾಯತ್‌ಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಹೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದ್ದು ಅಂತಹ ಯೂಟ್ಯುಬ್ ಚಾನೆಲ್ಗಳ ವಿರುಧ್ಧ ಮತ್ತು ನಕಲಿ ಪತ್ರಕರ್ತರ ವಿರುಧ್ಧ ಕ್ರಮ ಕೈಗೊಳ್ಳಲಾಗುವುದು. 

ಚಂದ್ರಕಾಂತ ನಂದರೆಡ್ಡಿ. ಡಿವೈಎಸ್‌ಪಿ ಇಂಡಿ. 


ಸುದ್ದಿ ಓದಿ