ಇಂಡಿ

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ

ಇಂಡಿ: ಸಮಾಜದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆದರೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ನೈತಿಕತೆ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕನಸುಗಳನ್ನು ಕಟ್ಟಿಕೊಂಡು ಆತ್ಮ ವಿಶ್ವಾಸದಿಂದ ಗುರಿ ಮುಟ್ಟಿ ಎಂದು ಯರನಾಳ ಮಠದ ಪರಮಪೂಜ್ಯ ಮ.ನಿ.ಪು ಗುರು ಸಂಗನಬಸವ ಮಹಾಸ್ವಾಮಿಗಳು ಹೇಳಿದರು. 

ಪಟ್ಟಣದ ಶಾಂತೇಶ್ವರ ಶಿಕ್ಷಣ ಸಂಸ್ಥೆಯಡಿಯಲ್ಲಿರುವ ಸೌ.ಎ.ಜಿ.ಗಾಂಧಿ ಬಾಲಕಿಯರ ಪ್ರೌಢ ಶಾಲೆ ಹಾಗೂ ಶ್ರೀಮತಿ ಶಾಲಿನಿ ಮಾಣಿಕಚಂದ ದೋಶಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನದ ಸಾನಿಧ್ಯವಹಿಸಿ ಅವರು ಮಾತನಾಡಿದರು. 

ಶೈಕ್ಷಣಿವಾಗಿ ಎತ್ತರಕ್ಕೆ ಬೆಳೆದರೂ ಕೂಡ, ಸಂಸ್ಕೃತಿ, ಪರಂಪರೆ ಮರೆಯಬಾರದು. ಅಕ್ಷರ ಜ್ಞಾನದ ಜತೆಗೆ ನೀತಿಯುತ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳು ಮುಖ್ಯವಾಗಿದೆ ಎಂದ ಅವರು. ಈ ಶಾಲೆಯ ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಪಡೆದು ಈ ಸಮಾಜದ ಜ್ವಲಂತ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡಿ ಸ್ವಾವಲಂಬಿ ಜೀವನ ನಡೆಸಿ ಎಂದು ಆಶೀರ್ವದಿಸಿದರು. 

ಡಾ. ಸಿದ್ದಪ್ಪ ದೇಸಾಯಿ ಮಾತನಾಡಿ, ಭಾರತ ಭವ್ಯವಾದ ಸಂಸ್ಕೃತಿಯನ್ನು ಹೊಂದಿರುವ ದೇಶ. ಇಂತಹ ರಾಷ್ಟ್ರದಲ್ಲಿ ಮಹಿಳೆಯರಿಗೆ ವಿಶಿಷ್ಠವಾದ ಸ್ಥಾನಮಾನವಿದೆ. ದೇಶ ಬದಲಾಗಬೇಕಾದರೆ ತಾಯಂದಿರ ಪಾತ್ರ ಬಲು ದೊಡ್ಡದು. ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ಪ್ರತಿಯೊಬ್ಬರ ಪಾಲಿನಲ್ಲಿ ಸಹಕಾರಿಣಿಯಾಗಿ ಗಂಧ ತೇಯುವಂತೆ ಜೀವನವೀಡೀ ಇನ್ನೊಬ್ಬರ ಬದುಕಿಗೆ ಬೆಳಕಾಗುವ ಮಹಾ ಮಹಿಳೆ ಜಗತ್ತಿಗೆ ಕಣ್ಣು ಎಂದರು. 

ಸಭೆಯ ಅಧ್ಯಕ್ಷತೆಯನ್ನು ಸಹಕಾರ್ಯದರ್ಶಿ ಸಿದ್ದಣ್ಣ ತಾಂಬೆ ವಹಿಸಿದರು. ಸಂಸ್ಥೆಯ ಗೌರವಕಾರ್ಯದರ್ಶಿ ಪ್ರಭಾಕರ ಬಗಲಿ, ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ಚಂದ್ರಕಾಂತ ದೇವರ, ಭೀಮನಗೌಡ ಪಾಟೀಲ, ಸಚಿನಕುಮಾರ ಗಾಂಧಿ, ವರ್ಧನ ದೋಶಿ, ಶಾಂತಪ್ಪ ಶಿರಕನಳ್ಳಿ, ಎಚ್‌.ಬಿ. ಬಿರಾದಾರ, ಪಿ.ಕೆ.ಪಿ.ಎಸ್ ಅಧ್ಯಕ್ಷ ರಾಜುಗೌಡ ಪಾಟೀಲ, ನಿರ್ದೇಶಕ ಶಾಂತುಗೌಡ ಬಿರಾದಾರ, ಪ್ರಾ.ಎ.ಬಿ.ಪಾಟೀಲ ಸೇರಿದಂತೆ ವಿದ್ಯಾರ್ಥಿನಿಯರು, ಪೋಷಕರು ಇದ್ದರು. ಕಾರ‌್ಯಕ್ರಮದ ನಂತರ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ‌್ಯಕ್ರಮಗಳನ್ನು ನಡೆಸಿದರು. 

ಡಾ.ಆದರ್ಶ ಪ್ರಭಾಕರ ಬಗಲಿಯವರನ್ನು ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರಿನ ನೂತನ ನಿರ್ದೇಶಕರಾದ ರಾಮನಗೌಡ  ಪಾಟೀಲ, ನಿವೃತ್ತ ಉಪನ್ಯಾಸಕ ಎ.ಎಚ್‌. ತೇಲಿ ಸನ್ಮಾನಿಸಲಾಯಿತು.. 

ಮುಖ್ಯೋಪಾಧ್ಯಾಯ ರಾಘವೇಂದ್ರ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕೃಷ್ಣ. ಎಚ್‌.ಬಿ, ಈರಣಕೇರಿ ನಿರೂಪಿಸಿ ವಂದಿಸಿದರು. ಇಂಡಿ ಶಾಂತೇಶ್ವರ ಶಿಕ್ಷಣ ಸಂಸ್ಥೆಯಡಿಯಲ್ಲಿರುವ ಸೌ. ಎ.ಜಿ.ಗಾಂಧಿ ಬಾಲಕಿಯರ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿದರು. 


ಸುದ್ದಿ ಓದಿ