ಇಂಡಿ

ಮಗುವಿನ ಸಮಗ್ರ ಬೆಳವಣೆಗೆ ಮಾಡುವುದು ಶಿಕ್ಷಣದ ಉದೇಶ : ಬಾಡಗಂಡಿ

ಮಗುವಿನ ಸಮಗ್ರ ಬೆಳವಣೆಗೆ ಮಾಡುವುದು ಶಿಕ್ಷಣದ ಉದೇಶ :  ಬಾಡಗಂಡಿ

ಇಂಡಿ26: ಶಿಕ್ಷಣ ಎಂದರೆ ಕೇವಲ ಪುಸ್ತಕ ಓದುವದು ಪರೀಕ್ಷೆ ಬರೆಯುವುದು ಮಾತ್ರ ಅಲ್ಲ. ಮಗುವಿನ ಸಮಗ್ರ ಬೆಳವಣೆಗೆ ಮಾಡುವುದು ಶಿಕ್ಷಣದ ಉದೇಶ ಎಂದು ವಿಜಯಪುರದ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ನಿಕಟಪೂರ್ವ ಪ್ರಾಚಾರ್ಯ ಎಸ್‌.ಪಿ. ಬಾಡಗಂಡಿ ಹೇಳಿದರು. 

ಅವರು ಶನಿವಾರ ತಾಲೂಕಿನ ನಾದ ಕೆಡಿ ಗ್ರಾಮದ ಸರಕಾರಿ ಪ್ರೌಡಶಾಲೆಯಲ್ಲಿ ಹಮ್ಮಿಕೊಂಡ ಬ್ಯಾಗ್ ಲೆಸ್‌ಡೇ ಕಾರ‌್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮಗುವಿನಲ್ಲಿ ಅಡಗಿರುವ ಜ್ಞಾನ ಹೊರತರಲು ಹಾಗೆಯೆ ಏಕಾತಾನಿಯ ತರಗತಿಗಳಿಂದ ಹೊರತು ಪಡಸಿ. ಮಕ್ಕಳ ಮನಸ್ಸಿನಲ್ಲಿ ಮನರಂಜನೆ ಜೊತೆ ಜ್ಞಾನ ನೀಡುವುದು, ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು. 

ಕಾರ‌್ಯಕ್ರಮದ ಅಧ್ಯಕ್ಷತೆವಹಿಸಿದ ಶಾಲಾ ಮುಖ್ಯಗುರು ಸಿ.ಎಂ. ಬಂಡಗಾರ ಮಾತನಾಡಿ, ಸರಕಾರದ ಸುತ್ತೋಲೆ ಅನುಸಾರ ನಾವು ಒಂದು ವರ್ಷದ ಕ್ರಿಯಾ ಯೋಜನೆ ಹಾಕಿಕೊಂಡಿದ್ದು. ವಿದ್ಯಾರ್ಥಿಗಳಿಗೆ ಇಂದು ಸಂಗೀತ ಜ್ಞಾನ ನೀಡಲು ಹಾಗೂ ಸಂಗೀತದಿಂದ ವ್ಯಕ್ತಿತ್ವ ವಿಕಸನ ಆಗಲು ಸಾಧ್ಯ. ಅದಕ್ಕಾಗಿ ಇಂದು ಮೂರು ಜನ ಸಂಗೀತ ಶಿಕ್ಷಕರು ಸಂಗೀತ ಜ್ಞಾನ ನೀಡಲು ಆಗಮಿಸಿದ್ದಾರೆ ಇದರಿಂದಾಗಿ ನಮ್ಮ ಶಾಲೆಯ ಮಕ್ಕಳು ಸಂಗೀತದಲ್ಲಿ ಆಸಕ್ತಿ ಬೆಳೆಕೊಳ್ಳಲಿದ್ದಾರೆ ಎಂದರು. 

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಎಸ್‌.ಡಿ.ಎಂ.ಸಿ. ಅಧ್ಯಕ್ಷ ಸಿದ್ದರಾಯ ಐರೋಡಗಿ, ಪರುಶುರಾಮ ಭಾಸಗಿ, ಎಸ್‌.ಜಿ. ಮ್ಯಾಕೇರಿ, ಸಂಗೀತಗಾರರಾದ ವೇತಾಳ ಜೋಶಿ, ಹಣಮಂತ ಏಳೆಗಾಂವ, ಸದಾಶಿವ ಬಿರಾದಾರ, ಆಚಿಜನೇಯ ಹೊಸಮನಿ, ಅಣ್ಣಾರಾಯ ಗುಗದಡ್ಡಿ, ಸಂತೋಷ ಬಿರಾದಾರ, ರೇಖಾ ನಾಗಠಾಣ, ಅನಿತಾ ಅಳಗುಂಡಗಿ, ರಾಮಚಂದ್ರ ಬಿರಾದಾರ, ಮಲ್ಲಿನಾಥ ಬಿರಾದಾರ, ಸಂಗನಗೌಡ ಹಚಡದ, ಮದರ್ಶಾ ಮಕಂದಾರ ಸೇರಿದಂತೆ ಅನೇಕರು ಇದ್ದರು. 

ಸುದ್ದಿ ಓದಿ