ಸಂವಿಧಾನದ ಚೌಕಟ್ಟಿನ ಅಡಿಯಲ್ಲಿ ದೇಶದ ಕಾನೂನು ಸ್ಥಾಪಿತ: ಈಶ್ವರ
ಇಂಡಿ: ಭಾರತ ದೇಶವು ವಿಶ್ವಮಾನ್ಯವಾದ ಸಂವಿಧಾನವನ್ನು ಹೊಂದಿದೆ. ಸಂವಿಧಾನದ ಚೌಕಟ್ಟಿನ ಅಡಿಯಲ್ಲಿ ದೇಶದ ಕಾನೂನು ಸ್ಥಾಪಿತವಾಗಿದೆ ಎಂದು ದಿವಾಣಿ ಜೆ.ಎಮ್.ಎಫ್.ಸಿ ನ್ಯಾಯಾಧೀಶ ಎಸ್.ಎಮ್. ಈಶ್ವರ ಹೇಳಿದರು.
ಶನಿವಾರ ಪಟ್ಟಣದ ಎಸ್‌ಎಸ್‌ವಿವಿ.ಸಂಘದ ಜಿ.ಆರ್.ಗಾಂಧಿ ಕಲಾ, ವಾಯ್.ಎ. ಪಾಟೀಲ ವಾಣಿಜ್ಯ ಹಾಗೂ ಎಮ್.ಎಫ್. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕ, ಸ್ಕೌಟ್ ್ಘ ಗೈಡ್ಸ್, ರಾಜ್ಯಶಾಸ್ತ್ರ ವಿಭಾಗ ಹಾಗೂ ತಾಲೂಕ ಕಾನೂನು ಸೇವಾ ಸಮಿತಿ ಇಂಡಿ ಇವರ ಸಹಯೋಗದೊಂದಿಗೆ ಭಾರತೀಯ ಸಂವಿಧಾನ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಪ್ರಗತಿಯ ಜೊತೆಗೆ ಜನಸಾಮಾನ್ಯರ ನೆಮ್ಮದಿಯ ಜೀವನ, ಕೋಮು ಸೌಹಾರ್ದತೆಗೆ ಸಂವಿಧಾನವು ಅಡಿಪಾಯದಂತೆ ಕೆಲಸ ಮಾಡುತ್ತಿದೆ. ಸಂವಿಧಾನದ ಆಶಯಗಳನ್ನು ಈಡೇರಿಸಲು ಎಲ್ಲರೂ ಬದ್ಧತೆಯಿಂದ ನಮ್ಮ ಪಾಲಿನ ಕೆಲಸವನ್ನು ಮಾಡುವ ಮೂಲಕ ದೇಶದ ಮುನ್ನಡೆಗೆ ತಮ್ಮ ಅಮೂಲ್ಯವಾದ ಕಾಣಿಕೆಯನ್ನು ನೀಡಬೇಕು ಎಂದರು.
ಜೆ.ಎಮ್.ಎಫ್.ಸಿ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಎಚ್.ಆರ್ ದೇವರಾಜು ಮಾತನಾಡಿ, ಭಾರತೀಯರಿಗೆ ಸಂವಿಧಾನ ಧರ್ಮಗ್ರಂಥವಿದ್ದಂತೆ. ಪ್ರತಿಯೊಬ್ಬರಲ್ಲಿಯು ಕಾನೂನಿನ ಪ್ರಜ್ಞೆ ಇರಬೇಕು. ಕಾನೂನು ಇಲ್ಲದ ಸಮಾಜವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಪ್ರತಿಯೊಬ್ಬರು ಸಂವಿಧಾನದ ಪ್ರಸ್ತಾವನೆಯನ್ನು ತಿಳಿದುಕೊಂಡು ರಾಷ್ಟ್ರದ ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳಬೇಕು. ದೇಶದ ಸಂವಿಧಾನ ರಕ್ಷಣೆ ಮಾಡಿ ಪ್ರಜಾಪ್ರಭುತ್ವವನ್ನು ಬಲಪಡಿಸಿಕೊಳ್ಳಬೇಕೆಂದರು.
ವಿ.ಎಸ್. ಹಂಜಗಿ ವಕೀಲರು ಕಾನೂನು ಅರಿವು-ನೆರವು ಉದ್ದೇಶಿಸಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಎಸ್.ಬಿ. ಜಾಧವ, ಎಸ್.ಆರ್. ಬಿರಾದಾರ, ಶ್ರೀಶೈಲ ಸಣ್ಣಕ್ಕಿ, ಐಶ್ವರ್ಯ ಕಂಬಾರ, ಡಾ. ವ್ಹಿ.ಎ. ಕೋರವಾರ, ಡಾ.ಎ.ಸಿ. ನಡವಿನಮನಿ, ಡಾ.ಪಿ.ಕೆ. ರಾಠೋಡ, ಡಾ.ಸುರೇಂದ್ರ ಕೆ, ಡಾ.ಸಿ.ಎಸ್. ಬಿರಾದಾರ, ಡಾ.ಶ್ರೀಕಾಂತ ರಾಠೋಡ, ಮಲ್ಲಿಕಾರ್ಜುನ ಕೋಣದೆ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತಾಲೂಕ ಕಾನೂನು ಸೇವಾ ಸಮಿತಿ ಇಂಡಿ ಇವರ ಸಹಯೋಗದೊಂದಿಗೆ ಭಾರತೀಯ ಸಂವಿಧಾನ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಎಸ್.ಎಮ್. ಈಶ್ವರ ಮಾತನಾಡಿದರು.