ಜಮಖಂಡಿ

ಯುವಕರು ದುಶ್ಚಟ ಹಾಗೂ ವ್ಯಸನಗಳಿಗೆ ಬಲಿಯಾಗುತ್ತಿರುವುದು ಸಮಾಜದಲ್ಲಿ ಆತಂಕಕಾರಿ ಬೆಳವಣಿಗೆ: ಡಾ.ತೋಂಟದ ಸಿದ್ಧರಾಮ

ಯುವಕರು ದುಶ್ಚಟ ಹಾಗೂ ವ್ಯಸನಗಳಿಗೆ ಬಲಿಯಾಗುತ್ತಿರುವುದು ಸಮಾಜದಲ್ಲಿ ಆತಂಕಕಾರಿ ಬೆಳವಣಿಗೆ: ಡಾ.ತೋಂಟದ ಸಿದ್ಧರಾಮ
The fact that young people are falling prey to bad habits and addictions is a worrying development i

ಲೋಕದರ್ಶನ ವರದಿ

                ಜಮಖಂಡಿ 09: ಯುವಕರು ದುಶ್ಚಟ ಹಾಗೂ ವ್ಯಸನಗಳಿಗೆ ಬಲಿಯಾಗುತ್ತಿರುವುದು ಸಮಾಜದಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ. ವ್ಯಸನಮುಕ್ತ ಸಮಾಜ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ಪ್ರತಿಯೊಂದು ಗ್ರಾಮಗಳಲ್ಲಿ ಪಾದಯಾತ್ರೆಯ ಮೂಲಕ ಓಲೇಮಠದ ಆನಂದ ದೇವರು ಅವರ ಸಂಕಲ್ಪ ಮಾಡಿ ವ್ಯಸನಮುಕ್ತ ಗ್ರಾಮಗಳನ್ನಾಗಿ ಮಾಡುತ್ತಿರುವುದು ಶ್ಲಾಘನೀಯ.                  ಅವರ ಚರಪಟ್ಟಾಧಿಕಾರವನ್ನು ಏಪ್ರಿಲ್ ತಿಂಗಳಿನಲ್ಲಿ ಬಸವ ಜಯಂತಿ ದಿನದಂದು ಬಸವ ಪುರಾಣನ ಕಾರ್ಯಕ್ರಮದಲ್ಲಿ ಪೂಜ್ಯರ ಚರಪಟ್ಟಾಧಿಕಾರ ಸಮಾರಂಭ ಏರಿ​‍್ಡಸಲು ಸಮಾಜದ ಎಲ್ಲ ಗುರು-ಹಿರಿಯರು ನಿಶ್ಚಯಿಸಿದ್ದಾರೆ ಎಂದು ಗದುಗಿನ ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು. 


           ನಗರದ ಓಲೆಮಠದ ಆವರಣದಲ್ಲಿ ನಡೆದ ಲಿಂ.ಡಾ.ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳವರ ದ್ವಿತೀಯ ಪುಣ್ಯಸ್ಮರಣೆ ಹಾಗೂ ಶ್ರೀಮಠದ ಕರ್ಣಧಾರತ್ವ ವಹಿಸಿಕೊಂಡಿರುವ ಆನಂದ ದೇವರು ಶ್ರೀಗಳ ನಿರಂಜನ ಚರಪಟ್ಟಾಧಿಕಾರ ದಿನಾಂಕ ಘೋಷಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. 


ಕಾವ್ಯ ರಚನೆಗೆ ಸಂವೇದನಾಶೀಲತೆ ಅಗತ್ಯ. ಸಂವೇನಾಶೀಲರಾಗಿದ್ದ ಲಿಂ.ಡಾ.ಚೆನ್ನಬಸವ ಮಹಾಸ್ವಾಮಿಗಳಲ್ಲಿ ಒಳ್ಳೆಯ ಕವಿ ಹೃದಯವಿತ್ತು. ಅಂತೆಯೇ ಉತ್ಕೃಷ್ಟ ಕಾವ್ಯ ರಚನೆ ಮಾಡಿ ಋಷಿ ಜೀವನ ನಡೆಸಿದವರು.  13ನೇ ಶತಮಾನದ ಬಳಿಕ ದ್ವಿಪದಿಯಲ್ಲಿ ಬಸವ ಪುರಾಣ ಬರೆದವರು ಡಾ.ಚೆನ್ನಬಸವ ಶ್ರೀಗಳು. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅದ್ಭುತ ಸ್ಥಾನ ಪಡೆದಿರುವ ಅವರ ಹೆಸರು ಸ್ಥಿರಸ್ಥಾಯಿಯಾಗಿದೆ. ಅವರು ರಚಿಸಿರುವ ಉತ್ಕೃಷ್ಟ ಸಾಹಿತ್ಯ ಕುರಿತು ವಿಚಾರ ಸಂಕಿರಣಗಳು ನಡೆಯಬೇಕು ಎಂದರು. 


ತೇರದಾಳ ಶಾಸಕ ಸಿದ್ದು ಸವದಿ ಮುಖ್ಯ ಅತಿಥಿಯಾಗಿ ಮಾತನಾಡಿ, ಡಾ.ಚೆನ್ನಬಸವ ಶ್ರೀಗಳು ತಾವು ಹೇಳಬೇಕಾಗಿದ್ದನ್ನು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದರು. ಯಾವುದೇ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಡುತ್ತಿದ್ದರು. ಅವರು ರಚಿಸಿದ ಸಾಹಿತ್ಯ ಮತ್ತು ನೀಡಿದ ಪ್ರವಚನಗಳನ್ನು ಸ್ಮರಿಸಿ ಪರಂಪರೆ ಉಳಿಸುವುದೆ ಪುಣ್ಯಾರಾಧನೆ ಎಂದರು. 

   


ಮನಕವಾಡದ ಶ್ರೀದೇವ ಮಂದಿರದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು, ಮುತ್ತಿನಕಂತಿ ಹಿರೇಮಠದ ಶಿವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಹಾವೇರಿಯ ಹುಕ್ಕೇರಿ ಮಠದ ಡಾ.ಸದಾಶಿವ ಮಹಾಸ್ವಾಮಿಗಳು, ಬೆಳಗಾವಿಯ ಶ್ರೀನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು, ಮುತ್ತೂರಿನ ರಾಚೋಟೇಶ್ವರ ವಿರಕ್ತಮಠದ ಗುರುಸಿದ್ಧೇಶ್ವರ ಮಹಾಸ್ವಾಮಿಗಳು ಹುನ್ನೂರಿನ ವಿಶ್ವನಾಥಶಾಸ್ರ್ತಿ ಕೊಣ್ಣೂರಮಠ ಸಾನ್ನಿಧ್ಯ ವಹಿಸಿದ್ದರು. 


ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮಾಜಿ ವಿಪ ಸದಸ್ಯ ಜಿ.ಎಸ್‌. ನ್ಯಾಮಗೌಡ, ಸುಶೀಲಕುಮಾರ ಬೆಳಗಲಿ, ಕೆ.ಕೆ. ತುಪ್ಪದ, ಬಸಯ್ಯ ಸಿದ್ಧಗಿರಿಮಠ, ಪ್ರೊ.ಬಸವರಾಜ ಕಡ್ಡಿ, ಡಾ.ಎಚ್‌.ಜಿ. ದಡ್ಡಿ, ಬಿ.ಎಸ್‌. ಸಿಂಧೂರ, ಎ.ಆರ್‌. ಶಿಂಧೆ, ರಾಜೇಸಾಬ ಕಡಕೋಳ, ಸದಾಶಿವ ಕವಟಗಿ, ಎಸ್‌.ಆರ್‌. ಶಿರೋಳ, ಮಹಾದೇವ ಈಟ್ಟಿ, ಶಿವಾನಂದ ಕುಲ್ಲೋಳ್ಳಿ, ಡಾ.ಟಿ.ಪಿ. ಬಾಂಗಿ, ಸಿ.ಎಸ್‌. ಬಾಂಗಿ, ಕಾಡು ಮಾಳಿ, ಈಶ್ವರ ಕರಬಸನವರ ವೇದಿಕೆಯಲ್ಲಿ ಇದ್ದರು. 


ಸಾನಿಯಾ ಹುನಗುಂದ ಹಾಗೂ ತಂಡದವರು ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ-ಅಲ್ಲಮಪ್ರಭು ನಡುವೆ ನಡೆದ ಸನ್ನಿವೇಶದ ನೃತ್ಯ ಪ್ರದರ್ಶನ ನೀಡಿದರು. ಸರಸ್ವತಿ ಸಬರದ, ಹನಮಂತ ಅಂಕದ ವಚನ ಪ್ರಾರ್ಥನೆ ನೆರವೇರಿಸಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು. 


ಪೋಟೋ : ಎ, ಜಮಖಂಡಿಯ ಓಲೆಮಠದ ಲಿಂ.ಡಾ.ಚೆನ್ನಬಸವ ಮಹಾಸ್ವಾಮಿಗಳವರ ದ್ವಿತೀಯ ಪುಣ್ಯಸ್ಮರಣೆ, ಆನಂದ ದೇವರು ಶ್ರೀಗಳ ಪಟ್ಟಾಧಿಕಾರ ದಿನಾಂಕ ಘೋಷಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. 


ಪೋಟೋ : ಬಿ, ಜಮಖಂಡಿಯ ಓಲೆಮಠದ ಲಿಂ.ಡಾ.ಚೆನ್ನಬಸವ ಮಹಾಸ್ವಾಮಿಗಳವರ ದ್ವಿತೀಯ ಪುಣ್ಯಸ್ಮರಣೆ, ಆನಂದ ದೇವರು ಶ್ರೀಗಳ ಪಟ್ಟಾಧಿಕಾರ ದಿನಾಂಕ ಘೋಷಣೆ ಸಮಾರಂಭದಲ್ಲಿ ಸಾನಿಯಾ ಹುನಗುಂದ ಹಾಗೂ ತಂಡದವರು ಅನುಭವ ಮಂಟಪ ನೃತ್ಯ ಪ್ರದರ್ಶಿಸಿದರು. 


ಸುದ್ದಿ ಓದಿ