ಉಪಪಂಗಡಗಳು ಒಂದಾದಾಗ ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿ ಸಾಧ್ಯ
ಓಂಕಾರ ಆಶ್ರಮದ ಡಾ. ಸ್ವರೂಪಾನಂದ ಶ್ರೀಗಳು ಅಭಿಮತ: ಬಸವರಾಜ ಕುಮಸಗಿ ಸನ್ಮಾನ ಸಮಾರಂಭ
ಇಂಡಿ 09: ವೀರಶೈವ ಲಿಂಗಾಯತ ಉಪಪಂಗಡಗಳು ಒಂದಾದಾಗ ಮಾತ್ರ ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಇಂಡಿಯ ಓಂಕಾರ ಆಶ್ರಮದ ಸಿದ್ದಾರೂಢ ಮಠದ ಡಾ. ಸ್ವರೂಪಾನಂದ ಶ್ರೀಗಳು ಹೇಳಿದರು.
ಅವರು ಶನಿವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಘಟಕ ಇಂಡಿ, ಶಾಂತೇಶ್ವರ ದೇವಸ್ಥಾನ ಸಮಿತಿ, ವೀರಶೈವ ಲಿಂಗಾಯತ ಸೌಹಾರ್ಧ ಪತ್ತಿನ ಸಹಕಾರಿ ಸಂಘ, ಕರ್ನಾಟಕ ವಿದ್ಯಾವರ್ಧಕ ಸಂಘ, ಹಾಗೂ ಬಸವರಾಜ ಕುಮಸಗಿ ಅಭಿಮಾನಿ ಬಳಗದಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಬಸವರಾಜ ಕುಮಸಗಿ ಅವರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ವೀರಶೈವ ಸಮಾಜ ಸಾಮಾಜಿಕ, ಶೈಕ್ಷಣಿಕ ಮತ್ತು ಅರ್ಥಿಕವಾಗಿಯೂ ಅತ್ಯಂತ ಹಿಂದುಳಿದಿರುವ ಸಮಾಜವಾಗಿದೆ. ಕಾರಣ ಉಪಪಂಗಡಗಳು ಒಂದಾದರೆ ವೀರಶೈವ ಲಿಂಗಾಯತರ ಅಭಿವೃದ್ಧಿಯಾಗುತ್ತದೆ ಎಂದರು.
ಖೇಡಗಿ ವಿರಕ್ತಮಠದ ಶಿವಬಸವರಾಜೇಂದ್ರ ಶ್ರೀಗಳು ಮಾತನಾಡಿ ಬಸವರಾಜ ಕುಮಸಗಿಯವರಿಗೆ ರಾಜ್ಯ ಕಾರ್ಯದರ್ಶಿ ಸ್ಥಾನ ಸಿಕ್ಕಿರುವದು ಅವರ ಜವಾಬ್ದಾರಿ ಹೆಚ್ಚಿಸಿದೆ. ಈ ದಿಶೆಯಲ್ಲಿ ವೀರಶೈವ ಲಿಂಗಾಯತ ಮಹಾಸಭೆ ಕಾರ್ಯವನ್ನು ಉತ್ತರ ಕರ್ನಾಟಕದಲ್ಲಿ ಜವಾಬ್ದಾರಿಯಾಗಿ ನಿರ್ವಹಿಸಲಿ ಎಂದು ಹಾರೈಸಿದರು.
ನಿವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ ಮಾತನಾಡಿ ಶಿರಸಂಗಿ ಲಿಂಗರಾಜರು, ಹಾನಗಲ್ಲದ ಕುಮಾರ ಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು, ಮುಖಂಡರ ತ್ಯಾಗದಿಂದ ವೀರಶೈವ ಮಹಾಸಭೆ ಬಲಗೊಂಡಿದ್ದು ಪ್ರಸ್ತುತ ಸಂದರ್ಭದಲ್ಲಿ ಜಾತಿ ಆಧಾರಿತ ಮೀಸಲಾತಿ ಕೊಡುವದರ ಬದಲಾಗಿ ವರಮಾನ ಆಧಾರಿತ ಮೀಸಲಾತಿ ಜಾರಿಗೆ ಬಂದರೆ ಸಮಾಜದಲ್ಲಿ ಒಳ ಪಂಗಡಗಳು ಕಡಿಮೆ ಆಗುತ್ತದೆ. ಜಾತಿ ಉಪಜಾತಿಗಳು ಗೌಣ ಆಗುತ್ತವೆ. ಅಖಂಡ ವೀರಶೈವ ಲಿಂಗಾಯತ ಮಹಾ ವೃಕ್ಷವು ಬಸವ ತತ್ವಗಳ ಅಡಿಯಲ್ಲಿ ಮುಂದುವರೆದರೆ ಸಮಾಜ ಅಭಿವೃದ್ಧಿ ಸಾಧ್ಯ ಎಂದರು.
ವೀರಶೈವ ಲಿಂಗಾಯತ ವಿಜಯಪುರ ಘಟಕದ ಶಂಕರಗೌಡ ಪಾಟೀಲ, ಶಾಂತೇಶ್ವರ ದೇವಸ್ಥಾನ ಸಮಿತಿಯ ಕಾಸುಗೌಡ ಬಿರಾದಾರ, ನ್ಯಾಯವಾದಿ ಎಸ್.ಎಲ್.ನಿಂಬರಗಿಮಠ, ಪ್ರಭುಲಿಂಗ ಕತ್ತಿ, ಸನ್ಮಾನಿತ ಬಸವರಾಜ ಕುಮಸಗಿ, ಪಿ.ಆರ್. ಹೂಗಾರ, ಎಚ್.ಎಸ್.ಎಳೆಗಾಂವಿ ಮಾತನಾಡಿದರು.
ವೀರಶೈವ ಲಿಂಗಾಯತ ಘಟಕ ಇಂಡಿ ಮತ್ತು ವಿವಿಧ ಸಂಘ ಸಂಸ್ಥೆಗಳು ಹಾಗೂ ಗೆಳೆಯರ ಬಳಗದ ವತಿಯಿಂದ ಬಸವರಾಜ ಕುಮಸಗಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಶಾಂತಪ್ಪ ಕಕ್ಕಳಮೇಲಿ, ಐ.ಬಿ.ಸುರಪುರ, ಉದ್ದಿಮೆದಾರ ಶ್ರೀಪತಿಗೌಡ ಬಿರಾದಾರ, ಪುರಸಭೆ ಮಾಜಿ ಅಧ್ಯಕ್ಷ ಭೀಮನಗೌಡ ಪಾಟೀಲ, ಶ್ರೀಕಾಂತ ದೇವರ, ಡಾ. ರಮೇಶ ಪೂಜಾರಿ, ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ನ್ಯಾಯವಾದಿ ಬಿ.ಕೆ.ಮಸಳಿ, ಕೆ.ವಿ.ಪಾಟೀಲ ಮತ್ತಿತರಿದ್ದರು.
ಶಸಾಪ ಅಧ್ಯಕ್ಷ ಆರ್.ವಿ.ಪಾಟೀಲ, ಜಿ.ಎಸ್.ಬಂಕೂರ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಸತೀಶ ಕುಂಬಾರ, ಶಿಕ್ಷಕ ದಶರಥ ಕೋರೆ, ಎಸ್.ಎಂ.ಕಡಕೋಳ, ನೀಲಕಂಠಗೌಡ ಪಾಟೀಲ, ಸುರೇಶ ಶಿವೂರ, ಗುರಣ್ಣ ಜಾಮಗೊಂಡಿ, ಪ್ರಭುಗೌಡ ಪಾಟೀಲ ಮತ್ತಿತರರಿದ್ದರು.