ಇಂಡಿ

ತಡವಲಗಾ ಕೆರೆ ಸಂಪೂರ್ಣ ಭರ್ತಿ ರೈತಾಪಿ ವರ್ಗ ಹರ್ಷ

ತಡವಲಗಾ ಕೆರೆ ಸಂಪೂರ್ಣ ಭರ್ತಿ ರೈತಾಪಿ ವರ್ಗ ಹರ್ಷ

ಸಚೀನ ಇಂಡಿ  

ಇಂಡಿ 23: ನಿಂಬೆನಾಡು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಕೆರೆ ನಾಲ್ಕು ವರ್ಷಗಳ ಬಳಿಕ ಸಂಪೂರ್ಣ ತುಂಬಿದ್ದು.ರೈತಾಪಿ ವರ್ಗದಲ್ಲಿ ಸಂತಸ ಮನೆಮಾಡಿದೆ.ಕರ್ನಾಟಕ ರಾಜ್ಯದಲ್ಲಿ ಸದಾ ಬರಗಾಲಕ್ಕೆ ತುತ್ತಾಗುವ ಜಿಲ್ಲೆ ಅಂದರೆ ವಿಜಯಪೂರ ಜಿಲ್ಲೆಯ ಇಂಡಿ ತಾಲೂಕು ಅಂದರೆ ತಪ್ಪಾಗಲಾರದು. ಇಂಡಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ನಿಂಬೆ ಹಣ್ಣು ಬೆಳೆಯುವ ಪ್ರದೇಶ ಅಂದರೆ  ತಡವಲಗಾ ಗ್ರಾಮ ಅಂದರೆ ತಪ್ಪಾಗಲಾರದು. ತಡವಲಗಾ ಗ್ರಾಮ ಅಂದರೆ ನಿಂಬೆ ಹಣ್ಣು ಬೆಳೆಯುವ ಕಣಜ ಎಂದು ಕರೆಯುತ್ತಾರೆ.ಆದರೆ ಒಂದು ಕಾಲದಲ್ಲಿ ಟ್ಯಾಂಕರ್ ಮೂಲಕ ನೀರು ಹಾಕಿ ನಿಂಬೆ ಗೀತೆಗಳನ್ನು ಉಳಿಸಿಕೊಂಡು ಸದಾ ಸಾಲಿನ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಈ ಬಾರಿ ಕೆರೆ ಸಂಪೂರ್ಣ ಭರ್ತಿಯಾಗಿದ್ದು ರೈತಾಪಿ ವರ್ಗಕ್ಕೆ ಸಂತಸ ಮನೆಮಾಡಿದೆ.

ಈ ಬಾರಿ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದ ಆಲಮಟ್ಟಿ ಅಣೆಕಟ್ಟೆಯನಲ್ಲಿ ಸಾಕಷ್ಟು ನೀರು ಸಂಗ್ರಹಣೆ ಇದ್ದ ಕಾರಣ ಅದನ್ನು ಅರಿತ ಏಃಎಓಐ ಅಧಿಕಾರಿಗಳು ಸಕಾಲದಲ್ಲಿ ತಿಡಗುಂದಿ ಬ್ಯಾಚ್ ಕಾಲುವೆ ಮೂಲಕ ತಡವಲಗಾ ಗ್ರಾಮದ ಕೆರೆಗೆ ಸತತ ನೀರು ಹರಿಸಿ ಕರೆ ಸಂಪೂರ್ಣ ತುಂಬಿ ಹಳದ ಮೂಲಕ ಬೋಳೆಗಾಂವ ಹಾಗೂ ಹೀರೆರೂಗಿ ತಲುಪಿದ್ದು.ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನಕ್ಕೆ ರೈತರಿಂದ ವ್ಯಾಪಕ ಮೆಚ್ಚುಗೆ ವ್ಯೆಕ್ತವಾಗಿದೆ.ತಡವಲಗಾ ಕೆರೆಗೆ ನೀರು ತುಂಬಿಸಬೇಕು ಎಂದು ಅನೇಕ ಬಾರಿ ಅಖಿಲ ಭಾರತೀಯ ಕಿಸಾನ್ ಸಂಘದ ವತಿಯಿಂದ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದು ಹಾಗೂ ಜಿಲ್ಲಾ ಅಧಿಕಾರಿಗಳ ಕಛೇರಿ ಎದುರು ಹಲವು ಬಾರಿ ಪ್ರತಿಭಟನೆ ಮಾಡಿದ್ದು ಇಲ್ಲಿ ಸ್ಮರಿಸಬಹುದಾಗಿದೆ.ಏನೆ ಇರಲಿ ವಿಜಯಪೂರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ ಬಿ ಪಾಟೀಲ ಹಾಗೂ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಮುತುವರ್ಜಿ ವಹಿಸಿ ಹಾಗೂ ಜಿಲ್ಲಾ ಅಧಿಕಾರಿಗಳು ಹಾಗೂ ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಹಾಗೂ ಕೃಷ್ಣ ಮೇಲ್ದಂಡೆ ನೀರಾವರಿ ಯೋಜನೆಯ ಅಧಿಕಾರಿಗಳ ಚಾಣಾಕ್ಷತೆ ಯಿಂದ  ತಡವಲಗಾ ಕೆರೆ ತುಂಬಿ ಹರಿಯುತ್ತಿರುವುದು ತುಂಬಾ ಸಂತೋಷವಾಗಿದೆ ಎನ್ನುತ್ತಾರೆ ಗ್ರಾಮದ ರೈತರು.ಇದೆ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಮೂಲಕ ಟೇಲ್ ಎಂಡ್ ಅವರಿಗೆ ನೀರು ಹರಿಸಬೇಕು ಹಾಗೂ ಇಂಡಿ ತಾಲ್ಲೂಕಿನ ಇತರೆ ಕೆರೆಗಳಿಗೂ ನೀರು ತುಂಬಿಸಿದರೆ ತುಂಬಾ ಸಂತೋಷವಾಗುತ್ತದೆ ಎಂದು ಇಂಡಿ ತಾಲೂಕು ಅಖಿಲ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾದ ಈರಣ್ಣ ಗೋಟ್ಯಾಳ ಹೇಳಿದರು. 

ಈ ಬಾರಿ ತಡವಲಗಾ ಗ್ರಾಮದ ಕೆರೆ ಸಂಪೂರ್ಣ ಭರ್ತಿಯಾಗಿದ್ದು ಸಂತಸ ತಂದಿದೆ.ತಡವಲಗಾ ಗ್ರಾಮದ ಅಭಿನವ ರಾಚೋಟೇಶ್ವರ ಶ್ರೀಗಳು,ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರನ್ನು ಕರೆದುಕೊಂಡು ಶೀಘ್ರದಲ್ಲೇ  ಕೆರೆಗೆ ಬಾಗಿನ ಅರೆ​‍್ಣ ಪೂಜೆ  ಮಾಡಲಾಗುವುದು.

ಸುನಂದಾ ವಾಲಿಕಾರ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರು

ದೇವರ ಕೃಪೆಯಿಂದ ಹಾಗೂ ಸಚಿವರು , ಶಾಸಕರು , ಜಿಲ್ಲಾ ಅಧಿಕಾರಿಗಳು, ಏಃಎಓಐ ಅಧಿಕಾರಿಗಳು, ಮುತುವರ್ಜಿ ವಹಿಸಿದ ಕೆರೆ ತುಂಬಿಸಿದ್ದಾರೆ.ಹಾಗೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲಾ ರೈತ ಬಾಂಧವರಿಗೆ ಧನ್ಯವಾದಗಳು.ಹಾಗೂ ಇಂಡಿ  ಚಡಚಣ ತಾಲ್ಲೂಕಿನ ಎಲ್ಲಾ ಕರೆ ತುಂಬಿಸಲು ಕ್ರಮಕೈಗೊಳ್ಳಬೇಕು.

ಗುರುನಾಥ ಬಗಲಿ ಅಖಿಲ ಭಾರತೀಯ ಕಿಸಾನ್ ಸಂಘದ ರಾಜ್ಯ ಉಪಾಧ್ಯಕ್ಷರು

ಈ ಬಾರಿ ಆಲಮಟ್ಟಿ ಅಣೆಕಟ್ಟೆಯನಲ್ಲಿ ಸಾಕಷ್ಟು ನೀರು ಸಂಗ್ರಹಣೆ ಇರುವುದರಿಂದ ವಿಜಯಪೂರ ಜಿಲ್ಲೆಯ ಎಲ್ಲಾ ಕೆರೆಗಳು ತುಂಬಿಸಬೇಕು.ಗುತ್ತಿಬಸವಣ್ಣ ಏತ ನೀರಾವರಿಯ ಯೋಜನೆಯ ಕಾಲುವೆ ಮೂಲಕ ಟೇಲ್ ಎಂಡ್ ಅವರಿಗೆ ನೀರು ಹರಿಸಬೇಕು ಇಲ್ಲವಾದರೆ ನಮ್ಮ ಅಖಿಲ ಭಾರತೀಯ ಕಿಸಾನ್ ಸಂಘದ ವತಿಯಿಂದ ಹೋರಾಟ ಮಾಡಲಾಗುವುದು.

ಮಲ್ಲನಗೌಡ ಪಾಟೀಲ (ಡೋಮನಾಳ)ವಿಜಯಪೂರ ಜಿಲ್ಲಾ ಅಧ್ಯಕ್ಷರು.ಅಖಿಲ ಭಾರತೀಯ ಕಿಸಾನ್ ಸಂಘದ


ಸುದ್ದಿ ಓದಿ