ತಿಳಿದು ಬದುಕಿ ತುಳಿದು ಬದುಕಬಾರದು: ಗುಂಡಣ್ಣ ಶಾಸ್ತ್ರಿಗಳು
ಇಂಡಿ 31: ತಾಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಶ್ರೀ ಮರುಳಸಿದ್ದೇಶ್ವರ ಜಾತ್ರೆಯ ನಿಮಿತ್ಯವಾಗಿ ನಡೆದ ಶ್ರೀ ಲಚ್ಯಾಣ ಶ್ರೀ ಸಿದ್ದಲಿಂಗ ಮಾಹಾರಾಜ ಜೀವನ ಚರಿತ್ರೆ ಪುರಾಣ ಸಂದರ್ಭದಲ್ಲಿ ಹೇಳಿದ ಗುಂಡಣ್ಣ ಶಾಸ್ತ್ರಿಗಳು ಬದುಕಿನ ನಿರಂತರ ಪಥದಲ್ಲಿ ನಾವೆಲ್ಲರೂ ಮಾನವ ಜನ್ಮ. ಮನುಷ್ಯನಲ್ಲಿ, ಆಸ್ತಿಪಾಸ್ತಿ, ಘನತೆ, ಗೌರವ ಎಲ್ಲವಿದ್ದರೂ ಕೊನೆಗೊಂದು ದಿನ ಯಾವುದೋ ಒಂದು ರೀತಿಯಲ್ಲಿ ಅವನಿಗೆ ನಿರಾಸೆ ಮೂಡುವುದೂ ಇದೆ.ಜೀವನ’ ಎಂಬುದು ಮೂರಕ್ಷರದ ಪದವಾದರೂ ಅದುವೇ ನಮ್ಮನ್ನು ಪುಳಕಗೊಳ್ಳುವಂತೆ ಮಾಡುತ್ತದೆ. ನಮ್ಮ ಬದುಕಿನುದ್ದಕ್ಕೂ ಅಸಾಧ್ಯ ವಾದುದನ್ನು ತಲುಪಬೇಕು ಎಂಬ ಹಂಬಲವಿರಬೇಕು ನಿಜ, ಆದರೆ ಅದು ಅತಿರೇಕಕ್ಕೆ ಹೋಗಿ ಜೀವನ ಹಾಳು ಮಾಡಿಕೊಂಡಿರುವಂತಾಗಬಾರದು.
ಬದುಕು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು, ಸಾವು ಇವುಗಳ ನಡುವೆ ಜೀವಿಗಳ ಅಭಿವೃದ್ಧಿ ಮತ್ತು ಹೋರಾಟ ಪ್ರಕ್ರಿಯೆ ಸಾಗುತ್ತದೆ.
ಕೆಲಮೊಂದು ಬಾರಿ ತೀರಾ ಕಲ್ಪನೆಗೆ ಒಳಪಟ್ಟು ಪ್ರಪಂಚ ಸುಂದರವಾಗಿ ಕಾಣುವುದು ಸಹಜ. ಆದರೆ ಅದೇ ಪ್ರಪಂಚ ಜೀವನದುದ್ದಕ್ಕೂ ನಾವು ಯಾವ ರೀತಿ ಸಮಾಜದಲ್ಲಿ ಬದುಕು ಸಾಗಿಸಬೇಕು ಎಂಬುದನ್ನೂ ತಿಳಿಸುತ್ತದೆ. ಇವೆಲ್ಲ ನಮಗೆ ಗೋಚರವಾಗುವುದು ಪ್ರಪಂಚದ ಒಳಿತು, ಕೆಡುಕುಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ.ಸಾಧನೆಗೆ ಪ್ರತಿಫಲದ ಸಮ್ಮಾನಜನನ- ಮರಣಗಳ ನಡುವಿನ ಜೀವನದಲ್ಲಿ ನೋವು, ನಲಿವೆಂಬ ಮುಳ್ಳುಗಳ ದಾರಿಯಿದೆ. ಅದರಿಂದ ಸಾಗಲು ಸಾಧ್ಯವಿಲ್ಲ ಎಂದು ನಾವು ಕೈಕಟ್ಟಿ ಕುಳಿತರೆ ನಮ್ಮಿಂದ ಯಾವ ಕೆಲಸವೂ ನಡೆಯಲು ಸಾಧ್ಯವಿಲ್ಲ. ಹೂವಿನ ಹಾಸಿಗೆ ನಮ್ಮದಾಗುವ ತನಕ ಪ್ರಯತ್ನಪಟ್ಟು, ಶ್ರಮ ವಹಿಸಿ, ಅದೇ ದಾರಿಯಲ್ಲಿ ನಡೆದರೆ ಅದರಿಂದಾಗುವ ಖುಷಿ ಲೆಕ್ಕಾಚಾರಕ್ಕೆ ಸಿಗದು, ಜತೆಗೆ ಈ ಸಾಧನೆಗೆ ಪ್ರತಿಫಲದ ಸಮ್ಮಾನವೂ ಸಿಗುತ್ತದೆ.
ಮನುಷ್ಯ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡಿರಬೇಕು. ಅಂದರೆ ಮುಂದೆ ನಾನು ಹೀಗಾಗಬೇಕು ಅನ್ನುವ ಗಟ್ಟಿ ನಿಶ್ಚಯ ಮನಸ್ಸಿನಲ್ಲಿ ಇದ್ದರೆ ಏನನ್ನಾದರೂ ಸಾಧಿಸಬಹುದು. ಗುರಿ ಇಟ್ಟುಕೊಳ್ಳುವುದರ ಜತೆಗೆ ಪ್ರಯತ್ನವೂ ಇರಬೇಕು. ಪ್ರಯತ್ನವಿದ್ದರೆ ಫಲ ದೊರಕುತ್ತದೆ.ಮನುಷ್ಯ ಜನ್ಮದಲ್ಲಿ ನಾವು ತಿಳಿದು ಬದುಕುಬೇಕು ಹೊರತು ಇನ್ನೊಬ್ಬರಿಗೆ ನೋವು ಉಂಟುಮಾಡುವ ಕೆಲಸ ಮಾಡಬಾರದು ಎಂದು ಹೇಳಿದರು.