ಬೀದಿ ನಾಟಕ ಪ್ರದರ್ಶನ: ಕಾರ್ಮಿಕ ಪದ್ಧತಿ ಜಾಗೃತಿ
ಬೈಲಹೊಂಗಲ 13: ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಬೆಳಗಾವಿ, ತಾಲೂಕಾಡಳಿತ ಹಾಗೂ ಪುರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಪಟ್ಟಣದ ಬಸ್ ನಿಲ್ದಾಣದಲ್ಲಿ ಜನಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಯಿತು.
ಸುಮಾರು 8-10 ಜನರ ತಂಡದ ಸದಸ್ಯರಿಂದ ನಡೆದ ಬೀದಿ ನಾಟಕದಲ್ಲಿ ಬಾಲ ಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳು, ಶಿಕ್ಷಣದ ಮಹತ್ವ, ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಕುರಿತು ಪ್ರದರ್ಶನದ ಮೂಲಕ ಜನಜಾಗೃತಿ ಮೂಡಿಸಲಾಯಿತು.
ಗ್ರೆಡ 2 ತಹಸೀಲ್ದಾರ ಎಂ.ಎ.ಚೌಧರಿ, ಡಿಪೋ ವ್ಯವಸ್ಥಾಪಕ ಚೇತನ ಸಾಣಿಕೊಪ್ಪ, ಪರಿಸರ ಅಭಿಯಂತರ ಅದಿಲಖಾನ ಪಠಾಣ, ಪುರಸಭೆ ಕಿರಿಯ ಆರೋಗ್ಯ ನೀರೀಕ್ಷಕ ಎ.ವಾಯ್.ಹೆಗಡೆ, ಭರತ ಕಲಾಚಂದ್ರ, ಸುಜಾತಾ ಮಗದುಮ, ಅಪ್ಪಾಸಾಬ, ಪುಂಡಲೀಕ ನಾಯಿಕ, ಕಾಮಗೌಡ ಇದ್ದರು.