ಛಾಯಾಗ್ರಾಹಕ ಶಿವಾನಂದಗೆ ರಾಜ್ಯ ಮಟ್ಟದ ಫೋಟೋಗ್ರಾಫಿ ಪ್ರಶಸ್ತಿ
ಇಂಡಿ30: ಪಟ್ಟಣದ ಹೆಸರಾಂತ ಛಾಯಾಗ್ರಾಹಕರಾದ ಶಿವಾನಂದ ಜೋಗುರರವರಿಗೆ ರಾಜ್ಯ ಮಟ್ಟದ ಫೋಟೋಗ್ರಾಫಿ ಎಕ್ಸಲೆನ್ಸಿ ಆವಾರ್ಡ ಲಭಿಸಿದೆ.
ಇತ್ತೀಚೆಗೆ ಬೆಂಗಳೂರಿನ ಅಂತರ ರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಪಟ್ಟಣದ ಜೇವೂರ ಸ್ಟುಡಿಯೋ ಮಾಲಿಕರಾದ ಶಿವಾನಂದ ಜೋಗುರ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಉತ್ತಮ ಛಾಯಾ ಗ್ರಾಹಕರಾಗಿ ಗುರುತಿಸಿಕೊಂಡಿರುವ ಇವರ ಸಾಧನೆಗಾಗಿ ಕರ್ನಾಟಕ ಛಾಯಾ ಗ್ರಾಹಕರ ಸಂಘ ಈ ಪ್ರಶಸ್ತಿ ನೀಡಿ ಗೌರವಿಸಿದೆ.
30 ಇಂಡಿ 3:
ಇಂಡಿ ಪಟ್ಟಣದ ಛಾಯಾಗ್ರಾಹಕ ಶಿವಾನಂದರವರಿಗೆ ರಾಜ್ಯ ಮಟ್ಟದ ಫೋಟೋಗ್ರಾಫಿ ಪ್ರಶಸ್ತಿ ನೀಡಿ ಗೌರವಿಸಿದ್ದು.