ಆಧ್ಯಾತ್ಮದ ಮೂಲಗುರಿ ಆತ್ಮೋದ್ಧಾರ: ನಾಗೇಶ್ವರ ಶ್ರೀಗಳು
ಲೋಕದರ್ಶನ ವರದಿ
ಗೋಕಾಕ: ಆಧ್ಯಾತ್ಮದ ಮೂಲಗುರಿ ಆತ್ಮೋದ್ಧಾರ. ಜೀವಾತ್ಮರು ಸುಖ-ದುಃಖಗಳಿಗೆ ಅಭಿಮುಖವಾಗಿ ಸ್ವರೂಪ ಜ್ಞಾನದ ಚಿಂತನೆಯಲ್ಲಿರಬೇಕು. ಬ್ರಹ್ಮಜ್ಞಾನ ಪಡೆಯಲು ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಹೀಗೆ ಹಲವು ಮತಭೇದಗಳಿವೆ. ಆದರೆ ನಿಷ್ಪಕ್ಷವಾದ ನೀತಿ ಭೋದೆಯು ಆತ್ಮೋದ್ಧಾರಕ್ಕೆ ಸಹಕಾರಿಯಾಗುತ್ತದೆಂದು ಹಾವೇರಿ ಭೀಮಾವದೂತ ಮಠದ ಪರಮ ನಾಗೇಶ್ವರ ಸ್ವಾಮಿಗಳು ಅಭಿಪ್ರಾಯಿಸಿದರು.
ಅವರು, ನಗರದ ಜಾಗ್ರತ ಶಂಕರಲಿಂಗ ಜಾತ್ರಾ ಮಹೋತ್ಸವದ ನಿಮಿತ್ತ ದಿ.22ರಂದು ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಆಧ್ಯಾತ್ಮ ಚಿಂತನ ಗೋಷ್ಠಿಯ ಅಧ್ಯಕ್ಷ ಸ್ಥಾನದಿಂದ ಆಶೀರ್ವಚನ ನೀಡುತ್ತ ಶ್ರೀಮನ್ನಿಜಗುಣ ಶಿವಯೋಗಿಗಳು ಕೈವಲ್ಯ ಪದ್ಧತಿ ಗ್ರಂಥದ ನೀತಿ ಕ್ರಿಯಾಚರ್ಯ ಸ್ಥಳದ ಎಂಟನೇ ಪದ್ಯದಲ್ಲಿ ಜೀವನವನ್ನು ಉದ್ದೇಶಿಸಿ 'ಚಿಂತಿಸದಿರು ಸುಖ-ದುಃಖದೆಡೆಯೋಳು ನೀನಿಂತು ತಿಳಿದ ಬಳಿಕ ಎಲೇ ಜೀವನೆ' ಎಂಬ ವಿಷಯದ ಮೇಲೆ ಅರ್ಥಪೂರ್ಣವಾಗಿ ಮಾತನಾಡಿದರು.
ಮಮದಾಪೂರ ಮಲ್ಲಿಕಾಜರ್ುನ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ಪೂಜ್ಯರಾದ ಮಲಗೌಡ ಪಾಟೀಲರು ಐಚ್ಛಿಕ ಭೋಗಕ್ಕೆ ಎಡೆಯಾಗದೇ ಪಾರಮಾರ್ಥ ಸುಖಕ್ಕಾಗಿ ಹಂಬಲಿಸಿರೆಂದು, ಸೋಮಶೇಖರ ಮಗದುಮ್ಮ ಅವರು ಚಿಂತಾಮುಕ್ತರಾಗಲು ಸತ್ಸಂಗಸಾಧನದೊಂದಿಗೆ ಸಮಾಜಮುಖಿಯಾಗಿರೆಂದು, ಗೋಕಾಕ ಫಾಲ್ಸ್ ಬಸವರಾಜ ಶರಣರು, ನಿಷ್ಕಾಮ ಕರ್ಮದಿಂದ ಅಂತರಂಗ ಶುದ್ಧಿಯೆಂದು, ದುಂಡಯ್ಯಸ್ವಾಮಿ ಪೂಜಾರಿಯವರು ತಿತೀಕ್ಷಾ ಗುಣದಿಂದ ವಿವೇಕಿಯಾಗಿ ಮನುಷ್ಯ ಜನ್ಮದ ಸಾಫಲ್ಯತೆ ಪಡೆಯಿರಿ ಎಂದು, ಶ್ಯಾಮಾನಂದ ಪೂಜೇರಿಯವರು ಸರ್ವ ಅನರ್ಥಕ್ಕೆ ಕಾರಣವಾದ ಚಿಂತೆ ನೀಗಿ ಬ್ರಹ್ಮಜ್ಞಾನಿಯಾಗಲು ಶಾಸ್ತ್ರಕ್ಕೆ ಶರಣಾಗಿರೆಂದು, ಸಾತಯ್ಯಸ್ವಾಮಿಗಳು ಸುಖ-ದುಃಖಗಳಲ್ಲಿಯ ಸಮಚಿತ್ತದಿಂದ ನಿಶ್ಚಿಂತೆ ಸಾಧ್ಯವೆಂದು ಅಭಿಪ್ರಾಯಿಸಿದರು. ವೇದಿಕೆಯ ಮೇಲೆ ಬಣಗಾರ ಸಮಾಜದ ಹಿರಿಯರಾದ ಗುರುಪುತ್ರಪ್ಪ ಜಿ. ಮೂತರ್ೇಲಿ, ಬಿ.ಎಂ. ಕುಬಸದ ಮುಂತಾದವರು ಉಪಸ್ಥಿತರಿದ್ದರು.
ವೀರಣ್ಣ ಎಸ್. ಕೊಳಕಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಿಕ್ಷಕರಾದ ಸುರೇಶ ಜಿ. ದೊಡಮನಿ ಸ್ವಾಗತಿಸಿದರು. ಶಂಕರಲಿಂಗ ಸಂಸ್ಥೆ ಚೇರಮನ್ನರಾದ ಡಾ. ರಾಜಶೇಖರ ಗುಣಕಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಆಧ್ಯಾತ್ಮ ಚಿಂತನ ಗೋಷ್ಠಿಯ ಸದುಪಯೋಗಕ್ಕೆ ಸರ್ವರ ಸಹಕಾರ ಕೋರಿದರು. ಆಧ್ಯಾತ್ಮ ಚಿಂತನ ಗೋಷ್ಠಿ ಕಾರ್ಯಕ್ರಮವನ್ನು ಜಾನಪದ ರಂಗಭೂಮಿ ಕಲಾವಿದ ಈಶ್ವರಚಂದ್ರ ಬೆಟಗೇರಿ ನಿರೂಪಿಸಿದರು. ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.