ರೈಲು ಸೋಲಾಪುರ-ಗದಗ ಮತ್ತೆ ಪ್ರಾರಂಭ
ಇಂಡಿ: ಕೊರೊನಾ ನಿಮಿತ್ಯ ಬಂದು ಮಾಡಲಾದ ರೈಲು ಸೋಲಾಪುರ-ಗದಗ ಮತ್ತೆ ಪ್ರಾರಂಭವಾಗಿದೆ.
ಶನಿವಾರ ಸೋಲಾಪುರದಿಂದ ಮುಂಜಾನೆ 11.50 ಕ್ಕೆ ಗದಗ ಹೋಗುವ ಎಕ್ಸಪ್ರೆಸ್ ರೈಲು ಸಂಖ್ಯೆ 11305 ಮತ್ತು ಗದಗದಿಂದ ರಾತ್ರಿ 2.30 ಕ್ಕೆ ಬಿಡುವ ಸೋಲಾಪುರಕ್ಕೆ ಹೋಗುವ 11306 ರೈಲು ಮತ್ತೆ ಪ್ರಾರಂಭವಾಗಿವೆ.
ಸೋಲಾಪುರದಿಂದ ಬಿಟ್ಟ ರೈಲು ಪಡನೂರ ರೇಲ್ವೆ ಸ್ಟೇಷನ್ ಕ್ಕೆ ಬಂದಾಗ ಪೂಜೆ ನೆರವೇರಿಸಿದರು. ಗ್ರಾ.ಪಂ ಅಧ್ಯಕ್ಷ ಘೇನು ಗಿರಣಿವಡ್ಡರ, ಮಾಜಿ ಸೈನಿಕ ಬಸವರಾಜ ಸಾಲೋಟಗಿ, ನಿವೃತ್ತ ಶಿಕ್ಷಕ ಭೈರಜಿ, ಸ್ಟೇಷನ್ ಮಾಸ್ತರ ಕಾಶಿನಾಥ ಅವರಾದಿ ಮತ್ತು ಊರಿನ ಪ್ರಮುಖ ನಾಗರಿಕರು ಉಪಸ್ಥಿತರಿದ್ದರು.