ದಾಳಿಂಬೆ ಬೆಳೆಯಲ್ಲಿ ಮಣ್ಣು ನೀರಿನ ನಿರ್ವಹಣೆ ಬಹಳ ಮಹತ್ವ
ಇಂಡಿ: ದಾಳಿಂಬೆ ಬೆಳೆಯಲ್ಲಿ ಮಣ್ಣು ಮತ್ತು ನೀರಿನ ನಿರ್ವಹಣೆ ಬಹಳ ಮಹತ್ವ. ಅದರ ಸಮಗ್ರ ಬೇಸಾಯಕ್ಕೆ ಸೂಕ್ತ ವಾತಾವರಣ ಜಿಲ್ಲೆಯಲ್ಲಿದೆ. ರೈತರು ಉತ್ಕೃಷ್ಟವಾದ ದಾಳಿಂಬೆ ಉತ್ಪಾದನೆಗೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರು ಹಿರಿಯ ವಿಜ್ಞಾನಿ ಡಾ. ಶಿವಶೆಂಕರಮೂತರ್ಿ ಹೇಳಿದರು.
ಪಟ್ಟಣದ ರೈಲ್ವೆ ನಿಲ್ದಾಣ ರಸ್ತೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡ ಈರುಳ್ಳಿ ಮತ್ತು ದಾಳಿಂಬೆ ಬೆಳೆಯ ಸಮಗ್ರ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಾಳಿಂಬೆ ಬೆಳೆಯಲ್ಲಿ ಸರಿಯಾದ ಸಮಯಕ್ಕೆ ಚಾಟನಿ ಮಾಡುತ್ತಾ ಸರಿಯಾಗಿ ನಿರ್ವಹಣೆ ಮಾಡಬೇಕು. ತೋಟದ ಸುತ್ತಮುತ್ತ ಜೈವಿಕ ತಡೆಗಳನ್ನು ನಿರ್ಮಾಣ ಮಾಡಿ ಬೆಳೆಯನ್ನು ಸಂರಕ್ಷಣೆ ಮಾಡಬೇಕು. ದಾಳಿಂಬೆ ಬೆಳೆಯಲ್ಲಿ ಮೊದಲ ಎರಡು ವರ್ಷಗಳವರೆಗೆ ಯಾವುದೇ ತರಹದ ಹಣ್ಣುಗಳನ್ನು ಪಡೆಯಬಾರದು. ರೋಗ ಮತ್ತು ಕೀಟಗಳ ಹಾವಳಿ ತಡೆಯಲು ಸಕಾಲಕ್ಕೆ ಜೈವಿಕ ಮತ್ತು ರಸಾಯನಿಕ ಕ್ರಮ ಹಾಗೂ ಖಚರ್ು ಕಡಿಮೆ ಮಾಡುವಂತಹ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ದಾಳಿಂಬೆ ಬೆಳೆಯಲ್ಲಿ ಪ್ರಮುಖ ರೋಗ ದುಂಡಾಣು, ಅಂಗಮಾರಿ ರೋಗ ಲಕ್ಷಣಗಳು ಮತ್ತು ನಿರ್ವಹಣೆ ಕ್ರಮಗಳ ಕುರಿತು ವಿವರವಾಗಿ ತಿಳಿಸಿದರು. ವೈಜ್ಞಾನಿಕವಾಗಿ ಬೋಡರ್ೊ ದ್ರಾವಣ ತಯಾರಿಸುವ ವಿಧಾನವನ್ನು ಚಿತ್ರ ಸಮೇತ ರೈತರಿಗೆ ಮನವರಿಕೆ ಮಾಡಿದರು. ರೈತರ ಪ್ರಶ್ನೆಗಳಿಗೆ ವೈಜ್ಞಾನಿಕವಾಗಿ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿದರು.
ಡಾ. ಸವಿತಾ ಬಿ. ವಿಜ್ಞಾನಿ (ಮಣ್ಣು ವಿಜ್ಞಾನ) ಮಾತನಾಡಿ, ಈರುಳ್ಳಿ ಬೆಳೆಯಲ್ಲಿ 15 ಕಿ.ಗ್ರಾಂ. ಬೆಂಟೊನೆಟ ಗಂಧಕ ಮತ್ತು 20 ಕಿ.ಗ್ರಾಂ. ನಲ್ಲಿ ತಿಪ್ಪೆಗೊಬ್ಬರದಲ್ಲಿ ಅಝೋಸ್ಫಿರಿಲಂ ಮತ್ತು ರಂಜಕ ಕರಗಿಸುವ ಜೈವಿಕ ಗೊಬ್ಬರ ತಲಾ ಒಂದು ಕಿ.ಗ್ರಾಂ. ನಂತೆ ಪ್ರತಿ ಎಕರೆಗೆ ಬಿತ್ತನೆ ಸಮಯದಲ್ಲಿ ನೀಡಬೇಕು ಅಥವಾ ಈರುಳ್ಳಿ ನಾಟಿ ಸಮಯದಲ್ಲಿ/45 ದಿನದ ಬೆಳೆಗೂ ಸಹ ಕೊಡಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಸಂಸ್ಥೆ ಸೋಲಾಪುರ ಅಭಿವೃದ್ದಿಪಡಿಸಿರುವ ಸೋನಾರ್ ಜೈವಿಕ ಮಿಶ್ರಣದಲ್ಲಿ ಪೆನಿಸಿಲಿಯಮ್ ಪೈನೋಪೈಲಮ್ ಎಂಬ ಸೂಕ್ಷ್ಮ ಜೀವಾಣುವಿದೆ. ಇದು ಪೊಟ್ಯಾಷಿಯಂ ಕರಗಿಸುವ ಜೀವಾಣಾವಾಗಿದ್ದು, ಇದು ದಾಳಿಂಬೆ ಬೆಳೆಗೆ ಪೊಟ್ಯಾಷಿಯಂ ಲಭ್ಯವಾಗುವಲ್ಲಿ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಸಾಯಿ ತೇಜ ಮಾರುಕಟ್ಟೆ ವ್ಯವಸ್ಥಾಪಕರು, ಕೊರಮಂಡಲ ಇಂಟರನ್ಯಾಷನಲ್ ಪ್ರೈವೇಟ್, ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ ಇಂಡಿಯ ವಿಜ್ಞಾನಿಗಳಾದ ಡಾ. ವೀಣಾ ಚಂದಾವರಿ, ವಿಜ್ಞಾನಿ (ಗೃಹ ವಿಜ್ಞಾನ), ಡಾ. ಪ್ರಕಾಶ ಜಿ. ವಿಜ್ಞಾನಿ (ಬೇಸಾಯಶಾಸ್ತ್ರ) ಸೇರಿದಂತೆ ತಾಲೂಕಿನ ವಿವಿಧ ಗ್ರಾಮದ 35 ಕ್ಕೂ ಹೆಚ್ಚಿವ ರೈತರು ಉಪಸ್ಥಿತರಿದ್ದರು.