ಬೈಲಹೊಂಗಲ

ಬಿಪಿನ್ ರಾವತ್ ಸೇರಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಬಿಪಿನ್ ರಾವತ್ ಸೇರಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಲೋಕದರ್ಶನ ವರದಿ 

ಬೈಲಹೊಂಗಲ 11: ಮೂರು ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಸೇರಿ  13 ಜನ ಹುತಾತ್ಮರಾದ ಯೋಧರಿಗೆ ಪಟ್ಟಣದ ಬಸವೇಶ್ವರ ಕೋಚಿಂಗ್ ಸೆಂಟರದಲ್ಲಿ ಮಾಜಿ ಯೋಧ ವೀರು ದೊಡವೀರ​‍್ಪನವರ ಮತ್ತು ಗೆಳೆಯರ ಬಳಗ ಹಾಗೂ ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಶ್ರದ್ಧಾಂಜಲಿ ಅರ​‍್ಿಸಲಾಯಿತು.  

      ಹುತಾತ್ಮರಾದ ವೀರ ಯೋಧರ ಭಾವಚಿತ್ರಕ್ಕೆ ಗೌರವ ಸರ್ಮಪಿಸಿ ಮಾತನಾಡಿ,  ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ರವರು ಅಪ್ಪಟ ದೇಶ ಭಕ್ತರು. ತಮ್ಮ ಇಡೀ ಬದುಕನ್ನು ಬಾಲ್ಯದಿಂದಲೇ ದೇಶಕ್ಕೆ ಅರೆ​‍್ಣ ಮಾಡಿದ ಮಹಾನುಭಾವರು, ಇವರನ್ನು ಮೂರು ಸೇನೆಗಳಿಗೆ ಏಕೈಕ ದಂಡನಾಯಕರನ್ನಾಗಿ  ಕೇಂದ್ರ ಸರ್ಕಾರ ನೇಮಿಸಿ ಅಧಿಕಾರ ವಹಿಸಿಕೊಟ್ಟಿತ್ತು. ಅವರ ಸೇವಾ ಅವಧಿಯಲ್ಲಿ ಹಲವಾರು ದಿಟ್ಟ ನಿರ್ಧಾರಗಳಿಂದ ದೇಶ ಸುಭದ್ರವಾಗಿತ್ತು.  ಅವರ ಅಕಾಲಿಕ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು, 

        ಕೆಲ ದೇಶದ್ರೋಹಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಾಚರಣೆ ಮಾಡಿ ದೇಶದ್ರೋಹದ ಕೃತ್ಯ ಎಸಗಿರುವುದು ತೀವ್ರ ಖಂಡನೀಯವಾಗಿದೆ. ನಮಗಾಗಿ ನಮ್ಮ ರಕ್ಷಣೆಗಾಗಿ ಹಗಲಿರುಳು ದೇಶ ದೇಶದ ಗಡಿಭದ್ರತೆಗಾಗಿ ಶ್ರಮಿಸಿದ ಮಹನ್ ಯೋಧ ಬಿಪಿನ್ ರಾವತ್ ಅವರು. ದ್ರೋಹಿಗಳಿಂದಲೇ ಇಂಥ ದೇಶಭಕ್ತರ ನಿಧನಕ್ಕೆ ಸಂಭ್ರಮಪಡಲು ಸಾಧ್ಯ. ಸರ್ಕಾರ ಅವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸಿದರು.  

     ಹುತಾತ್ಮರಾದ ಎಲ್ಲರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ, ಅಗಲಿಕೆಯಿಂದ ಕುಟುಂಬಕ್ಕೆ ಆದ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಮತ್ತು ಈ ದುರಂತದಿಂದ ಬದುಕುಳಿದ ಗ್ರೂಪ್ ಕ್ಯಾಪ್ಟನ್ ನೀರವ ಸಿಂಘ ರವರು ಬೆಂಗಳೂರಿನ ಕಮಾಂಡೋ ಹಾಸ್ಪಿಟಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರು ಅತಿ ಬೇಗನೆ ಗುಣಮುಖರಾಗಲೆಂದು ಪ್ರಾರ್ಥಿಸಿದರು. 

         ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಅರ್ಜುನ ಕಡಬಿ, ಗೆಳೆಯರ ಬಳಗದ ಅಧ್ಯಕ್ಷ ಶಿವಾನಂದ ಕೆಂಚನಗೌಡ, ಮಾಜಿ ಸೈನಿಕರಾದ ಶೇಖರ ಸತ್ತಿಗೇರಿ, ಗುರುನಾಥ  ಈಟಿಗೌಡರ, ಮಂಜುನಾಥ ಮಾಳಗಿ, ಯೋಧ ಗೊರವನಕೊಳ್ಳ, ಅರ್ಜುನ ಕುಂಟಗೋಳ ಹಾಗೂ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ