ಬೈಲಹೊಂಗಲ

ಶಿವಾಜಿ ಮಹಾರಾಜರು ಅಪ್ರತಿಮ ದೇಶಭಕ್ತ: ಕೌಜಲಗಿ

ಶಿವಾಜಿ ಮಹಾರಾಜರು ಅಪ್ರತಿಮ ದೇಶಭಕ್ತ: ಕೌಜಲಗಿ

ಲೋಕದರ್ಶನ ವರದಿ 

ಬೈಲಹೊಂಗಲ 02: ‘ಶಿವಾಜಿ ಮಹಾರಾಜರು ಅಪ್ರತಿಮ ದೇಶಭಕ್ತ. ಹಿಂದೂ ಸಾಮ್ರಾಜ್ಯದ ಅಧಿಪತಿಯಾಗಿ ಅಪಾಯದ ಅಂಚಿನಲ್ಲಿದ್ದ ಹಿಂದೂ ಸಮಾಜವನ್ನು ರಕ್ಷಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.  

   ಪಟ್ಟಣದ ಸೋಮವಾರ ಪೇಟೆಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.  

‘ಹಿಂದೂ ಸಮಾಜವನ್ನು ತುಳಿಯುವ ದೃಷ್ಠಿಯಿಂದ ಪರಕೀಯರು ಭಾರತದ ಮೇಲೆ ದಾಳಿ ಮಾಡಿ ಇಲ್ಲಿನ ಸಂಪತ್ತನ್ನು ಲೂಟಿ ಮಾಡುವದರೊಂದಿಗೆ ಹಿಂದೂ ಧರ್ಮಿಯರ ಹತ್ಯೆ, ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸಿದ ಸಂದರ್ಭದಲ್ಲಿ ಧರ್ಮ ರಕ್ಷಣೆಗೆ ನಿಂತ ಮೊದಲಿಗರಲ್ಲಿ ಶಿವಾಜಿ ಮಹಾರಾಜರು ಒಬ್ಬರು. ಅವರ ಆದರ್ಶ ತತ್ವಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದರು.  

ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ ಪಾಟೀಲ, ಡಾ.ಶಿವಶಂಕರ​‍್ರಸಾದ ದೇವಲಾಪುರ, ಸಂಜೀವಗೌಡ ಪಾಟೀಲ, ಸಮಾಜ ಭಾಂದವರಾದ ಯಲ್ಲಪ್ಪ ಬಡ್ಲಿ, ವಿ.ಕೆ.ಬಡ್ಲಿ, ಬಿ.ಬಿ.ಬಸಕ್ರಿ, ಎಂ.ವಾಯ್‌.ಘಂಟಿ, ಎಂ.ಎ.ಬಡ್ಲಿ, ಎಂ.ಎ.ಜಾಧವ, ಬಿ.ಟಿ.ಗಾಡದ, ಎಂ.ಬಿ.ಹಿರೇಮಠ, ಸಿದ್ದಪ್ಪ ಲೊಕೂರ, ರೀತೇಶ ಪಾಟೀಲ, ಸೋಮವಾರ ಪೇಟೆ ಗೆಳೆಯರ ಬಳಗದ ಸದಸ್ಯರು ಇದ್ದರು. 


ಸುದ್ದಿ ಓದಿ