ಇಂಡಿ

ವಿಮಾನ ನಿಲ್ದಾಣಕ್ಕೆ ಜ್ಯೋತಿ ಬಸವೇಶ್ವರ ಹೆಸರು ನಾಮಕರಣ : ಶಂಕರಗೌಡ ಸಂತಸ

ವಿಮಾನ ನಿಲ್ದಾಣಕ್ಕೆ ಜ್ಯೋತಿ ಬಸವೇಶ್ವರ ಹೆಸರು ನಾಮಕರಣ : ಶಂಕರಗೌಡ ಸಂತಸ

ಇಂಡಿ: ವಿಜಯಪುರ ವಿಮಾನ ನಿಲ್ದಾಣಕ್ಕೆ 12ನೇ ಶತಮಾನದ ಕ್ರಾಂತಿಯೋಗಿ ಬಸವ ಜ್ಯೋತಿ ಬಸವೇಶ್ವರ ಹೆಸರು ನಾಮಕರಣ ಮಾಡಲು ಸಚಿವ ಸಂಪುಟಲ್ಲಿ ಒಪ್ಪಿಗೆ ಸೂಚಿಸಿದ್ದು ಸಂತಸ ತಂದಿದೆ ಎಂದು ನಿಕಟಪೂರ್ವ ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ತಿಳಿಸಿದರು.  ಭಾನುವಾರ ದೂರವಾಣಿ ಮುಖಾಂತರ ಮಾತನಾಡಿದ ಅವರು ತಮ್ಮ ವಚನಗಳ ಮೂಲಕ ಸಾಮಾಜಿಕ ಶೋಷಣೆ ವಿರುದ್ಧ ಸಿಡಿದೆದ್ದು, ಸಮ ಸಮಾಜ ನಿರ್ಮಾಣ ಮಾಡಲು ಜಗತ್ತಿಗೆ ಸಾಮಾನತೆ ಸಾರಿದ ಬಸವೇಶ್ವರರ ನಾಮಕರಣ ಅರ್ಥಪೂರ್ಣವಾಗಿದೆ ಎಂದರು.  

ಮಹತ್ವದ  ನಿರ್ಣಯವನ್ನು ತೆಗೆದುಕೊಂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.  

ಸುದ್ದಿ ಓದಿ