ಜೆಡಿಎಸ್ ನಗರ ಘಟಕದ ಅಧ್ಯಕ್ಷರಾಗಿ ಸಚಿನ ಕುಂಬಾರ ನೇಮಕ
ಇಂಡಿ: ಜೆಡಿಎಸ್ ನಗರ ಘಟಕದ ಅಧ್ಯಕ್ಷರಾಗಿ ಸಚಿನ ಕುಂಬಾರ ಅವರನ್ನು ನೇಮಕ ಮಾಡಿ ತಾಲೂಕ ಅಧ್ಯಕ್ಷ ಬಿ.ಡಿ. ಪಾಟೀಲ ಗುರುವಾರ ಆದೇಶ ನೀಡಿದರು.
ಜೆಡಿಎಸ್ ಪಕ್ಷ ಬೇರು ಮಟ್ಟದಿಂದ ಸಂಘಟಿಸಿ, ಪಕ್ಷವನ್ನು 2023ಕ್ಕೆ ಅಧಿಕಾರಕ್ಕೆ ತರಲು ಶ್ರಮಿಸಭೆಕು. ಬಡವರು, ಅಲ್ಪಸಂಖ್ಯಾತರು, ಕಾರ್ಮಿಕರ ಕುಂದು-ಕೊರತೆಗಳ ಪರಿಹಾರಕ್ಕಾಗಿ ಸರಕಾರದ ವಿರುದ್ಧ ಸಂಘಟಿತ ಹೋರಾಟ ಮಾಡಲು ಆದೇಶದಲ್ಲಿ ತಿಳಿಸಲಾಗಿದೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ಸಚೀನ ಕುಂಬಾರ, ಎಚ್.ಡಿ. ಕುಮಾರಸ್ವಾಮಿಯವರು ಪಂಚರತ್ನ ಕಾರ‌್ಯಕ್ರಮಗಳ ಮುಖಾಂತರ ಜನಸಾಮಾನ್ಯರ ಅನುಕೂಲಕ್ಕಾಗಿ ಪಣತೋಟಿದ್ದಾರೆ. ಅದೇ ರೀತಿ 2023ರ ಅಭ್ಯರ್ಥಿ ಬಿ.ಡಿ. ಪಾಟೀಲರು ಹುಟ್ಟು ಹೋರಾಟಗಾರ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹಗಲಿರುಳು ಹೋರಾಟ ಮಾಡಿದ ವ್ಯಕ್ತಿಗೆ ಮತಕ್ಷೇತ್ರದ ಜನತೆ ಆರ್ಶಿವಾದ ನೀಡಬೇಕು ಎಂದರು.
ಜೆಡಿಎಸ್ ಮುಖಂರಾದ ಅಯೂಬ ನಾಟೀಕಾರ, ಸಿದ್ದು ಡಂಗಾ, ಶ್ರೀಶೈಲಗೌಡ ಪಾಟೀಲ, ಶಾಂತಯ್ಯ ಪತ್ರಿಮಠ, ಶಾಮರಾಯ ಕಂಬಾರ, ಶಾಂತಪ್ಪ ಕುಂಬಾರ, ಮಲ್ಲಪ್ಪ ಕಂಬಾರ, ನಜೀರ್ ಚಾಚಾ, ಸಂತೋಷ ತಾಂಬೆ, ಮಂಜು ಬಡಿಗೇರ, ಈರಣ್ಣ ಮಾಹಜನಶಟ್ಟಿ, ಬಸು ಬಡಿಗೇರ, ಶಿವು ಕುಂಬಾರ, ಸೋಮು ಬಡಿಗೇರ, ಸಿದ್ದು ಬಡಿಗೇರ, ರಾಜಶೇಖರ ಜಮಾದಾರ, ದುಂಡು ಬಿರಾದಾರ, ಸೇರಿದಂತೆ ಅನೇಕ ಜೆಡಿಎಸ್ ಕಾರ‌್ಯಕರ್ತರು ಇದ್ದರು.