ಇಂಡಿ

ನಿವೃತ್ತ ನೌಕರರ ಮಾರ್ಗದರ್ಶನ ಯುವಕರಿಗೆ ಅತೀ ಅವಶ್ಯ: ಶಾಸಕ ಪಾಟೀಲ

ನಿವೃತ್ತ ನೌಕರರ ಮಾರ್ಗದರ್ಶನ ಯುವಕರಿಗೆ ಅತೀ ಅವಶ್ಯ: ಶಾಸಕ ಪಾಟೀಲ

ಇಂಡಿ: ನಿವೃತ್ತ ನೌಕರರು ವೃತ್ತಿಯಿಂದ ಮಾತ್ರ ನಿವೃತ್ತಿಯಾಗಿದ್ದು ಅವರ ಸೇವೆ ಸಮಾಜಕ್ಕೆ, ಅವರ ಮಾರ್ಗದರ್ಶನ ಯುವಕರಿಗೆ ಅತೀ ಅವಶ್ಯವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. 

ಅವರು ಸೋಮವಾರ ಪಟ್ಟಣದ ಪ್ರಾಜಾಪಿತ ಈಶ್ವರಿಯ ವಿ ವಿಯಲ್ಲಿ ಭಾರತ ಅಮೃತ ಮಹೋತ್ಸವದ ಅಂಗವಾಗಿ 75 ವರ್ಷ ಮೇಲ್ಪಟ್ಟ ಹಿರಿಯ ನಿವೃತ್ತ ಸರಕಾರಿ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.  

ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಿವೃತ್ತ ನೌಕರರಿಗೆ ಸಭೆ ನಡೆಸಲು ಕೋಣೆಯ ವ್ಯವಸ್ಥೆ ಮಾಡುವುದಾಗಿ ತಿಳಿಸಿದ ಅವರು, ಬರುವ ದಿನಗಳಲ್ಲಿ ಸಂಘದ ಹೆಸರಿನಲ್ಲಿ ನಿವೇಶನ ನೀಡಿ ತಮ್ಮ ಅನುದಾನದಲ್ಲಿ ಕಟ್ಟಡ ಕಟ್ಟಲು ಸಹಾಯಮಾಡುವದಾಗಿ ತಿಳಿಸಿದರು. 

ಸಾನಿಧ್ಯ ವಹಿಸಿದ ಇಂಡಿಯ ವಿವಿ ಸಂಚಾಲಕಿ ಯಮುನಾ ಅಕ್ಕನವರು ಮಾತನಾಡಿ, ಬಾಬಾರವರ ಸತ್ಯ ಪರಿಚಯ ಕುರಿತು, ಮತ್ತು ನಿವೃತ್ತ ನೌಕರರು ಆಧ್ಯಾತ್ಮದ ಕಡೆಗೆ ಒಲುವು ತೋರಿ ಯುವಕರಿಗೆ ಮಾರ್ಗದರ್ಶನ ನೀಡಿ ಸಂಸ್ಕೃತಿಯ ಪರಂಪರೆ ಉಳಿಸಲು ಕೇಳಿಕೊಂಡರು.  ಸಂಘದ ಅಧ್ಯಕ್ಷ ಎಸ್‌.ಆರ್‌.ಪೋಳ ನಿವೃತ್ತ ನೌಕರರ ಬೇಡಿಕೆ ಮತ್ತು ಸಮಸ್ಯೆ ಕುರಿತು, ಸನ್ಮಾನಿತ ಐ.ಬಿ. ಸುರಪುರ, ಎಸ್‌.ಬಿ. ಹೂಗಾರ, ವಿಶ್ವನಾಥ ಜಾಮಗೊಂಡಿ ಮಾತನಾಡಿದರು.  

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಕೆ.ಬಗಲಿ, ನಿವೃತ್ತ ಅಧಿಕ್ಷಕ ಎಸ್‌.ಡಿ. ಪಾಟೀಲ, ಎಸ್‌.ಪಿ. ಬಿರಾದಾರ, ಬಿ.ಎ.ಬಿರಾದಾರ ಇವರನ್ನು ಸನ್ಮಾನಿಸಲಾಯಿತು. 

ಸುದ್ದಿ ಓದಿ