ಇಂಡಿ

ಜಾತಿ ಪ್ರಮಾಣ ಪತ್ರದ ಸಮಸ್ಯೆ ಶೀಘ್ರ ಇತ್ಯರ್ಥಪಡಿಸುವಂತೆ ಒತ್ತಾಯಿಸಿ ಮನವಿ

ಜಾತಿ ಪ್ರಮಾಣ ಪತ್ರದ ಸಮಸ್ಯೆ ಶೀಘ್ರ ಇತ್ಯರ್ಥಪಡಿಸುವಂತೆ ಒತ್ತಾಯಿಸಿ ಮನವಿ

ಇಂಡಿ: ಬೇಡ ಜಂಗಮ ಸಮಾಜಬಾಂಧವರಿಗೆ ಪರಿಶಿಷ್ಠ ಜಾತಿ ಪ್ರಮಾಣ ಪತ್ರದ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸುವಂತೆ ಒತ್ತಾಯಿಸಿ ಸೋಮವಾರ ಪಟ್ಟಣದಲ್ಲಿ ಮಠಾಧೀಶರು ಮತ್ತು ಜಂಗಮ ಸಮಾಜದ ಮುಖಂಡರು ತಾಲೂಕು ಆಡಳಿತ ಸೌಧದಲ್ಲಿ  ಪ್ರತಿಭಟನೆ ನಡೆಸಿ ಗ್ರೇಡ್ 2ತಹಸೀಲ್ದಾರ ಆರ್‌.ಎಸ್‌. ರೇವಡಿಗಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.  

ಜಂಗಮ ಸಮಾಜದ ಜಿಲ್ಲಾ ಗೌರವ ಅಧ್ಯಕ್ಷ ನ್ಯಾಯವಾದಿ ಎಸ್‌.ಎಲ್‌.ನಿಂಬರಗಿಮಠ ಮಾತನಾಡಿ ಬೇಡ ಜಂಗಮರ ಅಚಾರ ವಿಚಾರಗಳು ಮತ್ತು ಜಂಗಮರು ಕಾಲಿಗೆ ಗೆಜ್ಜೆ ಕಟ್ಟಿ ಮನೆ ಮನೆ ತಿರುಗಿ ಜೀವನ ಸಾಗಿಸುವ ಜನರಿದ್ದು ಧರ್ಮದ ಪ್ರಚಾರ ಮಾಡುತ್ತಿದ್ದು 1861 ರಲ್ಲಿ ಹೈದ್ರಾಬಾದದ ಅರಸರು  ಸಹ ಬೇಡ ಜಂಗಮರು ಎಂದು ವರ್ಣನೆ ಮಾಡಿದ್ದು ಭಾರತ ಸರಕಾರದ ಪರಿಶಿಷ್ಟ ಜಾತಿ 19 ನೇ ಕಾಲಂರಲ್ಲಿ ಬೇಡ ಜಂಗಮ ಬಗ್ಗೆ ಉಲ್ಲೇಖಿಸಿದೆ ಎಂದರು.  

ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರರು, ತಡವಲಗಾದ ರಾಚೋಟೇಶ್ವರ ಶಿವಾಚಾರ್ಯರರು ಮಾತನಾಡಿ, ಬೇಡ ಜಂಗಮ ಹೋರಾಟದ ನಾಡಿನ ಪೂಜ್ಯ ಮಠಾಧೀಶರು ಮತ್ತು ಅಧ್ಯಕ್ಷರು ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಬಿ.ಡಿ.ಹಿರೇಮಠ ಇವರ ನೇತೃತ್ವದಲ್ಲಿ ಬೇಡ ಜಂಗಮ ಸತ್ಯ ಪ್ರತಿಪಾದನಾ ಹೋರಾಟ ನಡೆಯುತ್ತಿದ್ದು 5.6.2022 ರಂದು ಮುಖ್ಯಮಂತ್ರಿಗಳಿಗೆ ಪಾದಯಾತ್ರೆ ಹೋರಾಟದ ಸಂದರ್ಭದಲ್ಲಿ ಅಧ್ಯಕ್ಷರನ್ನು ಮತ್ತು ಮಠಾಧೀಶರನ್ನು ಹಾಗೂ ಅಪಾರ ಬೇಡ ಜಂಗಮರನ್ನು ಬಂಧನ ಮಾಡಿದ್ದು ಬೇಡ ಜಂಗಮ ಸಮಾಜ ಮತ್ತು ಭಕ್ತರು ಬಲವಾಗಿ ಖಂಡಿಸುತ್ತೇವೆ ಎಂದರು.  

ಪ್ರತಿಭಟನೆಯಲ್ಲಿ ಬಂಥನಾಳದ ವೃಷಭಲಿಂಗೇಶ್ವರ ಶ್ರೀಗಳು, ಅಥರ್ಗಾದ ಮುರಘೇಂದ್ರ ಶಿವಾಚಾರ್ಯರು, ಇಂಚಗೇರಿಯ ಮೌನೇಂದ್ರ ಶಿವಾಚಾರ್ಯರು, ಚಡಚಣದ ಮಲ್ಲಿಕಾರ್ಜುನ ಶ್ರೀಗಳು, ಅಗರಖೇಡದ ಪ್ರಭುಲಿಂಗ ಮತ್ತು ರೋಡಗಿಯ ಶಿವಲಿಂಗೇಶ್ವರ ಶಿವಾಚಾರ್ಯರು ಸೇರಿದಂತೆ, ಎಸ್‌.ಎಸ್‌.ರೂಗಿಮಠ, ಮಲ್ಲಯ್ಯ ಸಾರಂಗಮಠ, ಸೋಮಶೇಖರ ಹಿರೇಪಟ್ಟ, ಸೋಮಯ್ಯ ಚಿಕ್ಕಪಟ, ಷಡಾಕ್ಷರಿ ಹಿರೇಮಠ, ಎಸ್‌.ಎಸ್‌.ಹಿರೇಪಟ್ಟ ಮತ್ತಿತರರು ಇದ್ದರು.  

ಸುದ್ದಿ ಓದಿ