ಇಂಡಿ

ಜಿಲ್ಲಾಧ್ಯಕ್ಷರಾಗಿ ರಾಜಕುಮಾರ ಶಿಂದ್ರೆ ನೇಮಕ

ಜಿಲ್ಲಾಧ್ಯಕ್ಷರಾಗಿ ರಾಜಕುಮಾರ ಶಿಂದ್ರೆ ನೇಮಕ
ಇಂಡಿ: ಬಹುಜನ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ರಾಜಕುಮಾರ ಶಿಂದ್ರೆ ಭಾವಚಿತ್ರ.

ಇಂಡಿ 29: ತಾಲೂಕಿನ ಹಿರೇರೂಗಿ ಗ್ರಾಮದ ರಾಜಕುಮಾರ ಶಿಂದ್ರೆ ಅವರನ್ನು ಬಹುಜನ ದಲಿತ ಸಂಘರ್ಷ ಸಮಿತಿ ರಿ, ವಿಜಯಪುರ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ  ಕುದರಿ ಆದೇಶ ಪತ್ರ ವಿತರಿಸಿದ್ದಾರೆ. 

ನಾಡು, ನುಡಿ, ನೆಲ ಜಲ ರೈತ ಕಾರ್ಮಿಕರ ವಿದ್ಯಾರ್ಥಿಗಳ ಹಾಗೂ ಮಹಿಳೆಯರ ರಕ್ಷಣೆ ಮಾಡುವ ಮೂಲಕ ಬಹುಜನ ದಲಿತ ತತ್ವ ಸಿದ್ಧಾಂತ ಗಳಿಗೆ ಬದ್ಧರಾಗಿ ಕೆಲಸ ನಿರ್ವಹಿಸಬೇಕು ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ. 

ಸುದ್ದಿ ಓದಿ