ಇಂಡಿ

ಸಾರ್ವಜನಿಕರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿ: ಕೋಳೆಕರ

ಸಾರ್ವಜನಿಕರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿ: ಕೋಳೆಕರ


ಇಂಡಿ: ಮಹಾಮಾರಿ ಹಾಗೂ ಭಯಾನಕ ಕಾಯಿಲೆ ಕ್ಯಾನ್ಸರ್‌್ ಬಗ್ಗೆ ಜಾಗೃತಿ ಮತ್ತು ಸಾರ್ವಜನಿಕರಲ್ಲಿ ತಿಳುವಳಿಕೆ ಮತ್ತು ಮುಂಜಾಗೃತೆ ಅಗತ್ಯತೆ ಇದೆ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ರಾಜೇಶ ಕೋಳೆಕರ ಹೇಳಿದರು. 

ಅವರು ಶುಕ್ರವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎನ್‌.ಸಿ.ಡಿ ಘಟಕದ ವತಿಯಿಂದ ನಡೆದ ವಿಶ್ವ ಕ್ಯಾನ್ಸರ್‌್‌ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಮನುಷ್ಯ ದುಶ್ಚಟಗಳ ದಾಸನಾಗುತ್ತಿದ್ದು ತಂಬಾಕು ಉತ್ಪನ್ನಗಳ, ವಿವಿಧ ಅಲ್ಕೋಹಾಲ್ ಯುಕ್ತ ಪಾನೀಯಗಳ ಸೇವನೆಯಿಂದ ಯುನಜನತೆ ಬಾಯಿ ಕ್ಯಾನ್ಸರ್ ಅದಲ್ಲದೆ ಮಹಿಳೆಯರಲ್ಲಿ ಗರ್ಭಕೋಶ ಕ್ಯಾನ್ಸರ್, ಸ್ತನ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದು ಮುಂಜಾಗೃತೆ ಅವಶ್ಯಕ ಎಂದರು. 

ಡಾಽಽ ಅನೀಲ ವಾಲಿ, ಡಾಽ.ಪ್ರೀತಿ ಕೋಳೆಕರ ಕ್ಯಾನ್ಸರ ಬಾರದಂತೆ ಮುನ್ನಚ್ಚರಿಕೆ ಕುರಿತು ಮಾತನಾಡಿದರು. 

ವೈದ್ಯರಾದ ಪ್ರವೀಣ ರಾಠೋಡ, ರವಿ ಬಜಂತ್ರಿ, ಜಗದೀಶ ಬಿರಾದಾರ, ಅಮೀತ ಕೋಳೆಕರ, ವಿಪುಲ್ ಕೋಳೆಕರ, ಸಿಬ್ಬಂದಿ ಬಸವರಾಜ ಅವರಸಂಗ್, ಅಶೋಕ ಮಾದರ, ಕಾಮಣ್ಣ ದಶವಂತ, ಸೋಮನಿಂಗ ಬಿರಾದಾರ, ಚಂದ್ರಾಮ ಮೇಡೆಗಾರ, ರಾಯಲ್ ಗುರುಸ್ವಾಮಿ ಮತ್ತಿತರಿದ್ದರು. 


ಸುದ್ದಿ ಓದಿ