ಪಾರ್ಕಿಂಗ್ ಸಮಸ್ಯೆ ಅಂಗಡಿಕಾರರಿಂದ ಪ್ರತಿಭಟನೆ
ಇಂಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಪಾರಸ್ ಕಾಂಪ್ಲೇಕ್ಸದ ಅಂಗಡಿಗಳನ್ನು ಬಂದ್ ಮಾಡಿ ಅಂಗಡಿಕಾರರು ಶನಿವಾರ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿ ಅಂಗಡಿಗೆ ಡಿಪಾಸಿಟ್ ಇಟ್ಟಿದ್ದೇವೆ. ಪ್ರತಿ ತಿಂಗಳು 20 ಸಾವಿರಕ್ಕೂ ಅಧಿಕ ಬಾಡಿಗೆ ನೀಡುತ್ತೇವೆ. ಕಾರಣ ಅಂಗಡಿಗಳ ಮುಂದೆ ಪಾರ್ಕಿಂಗಗೆ ಬಸವೇಶ್ವರ ವೃತ್ತದಲ್ಲಿ ಮತ್ತು ಅಂಗಡಿಗಳ ಸುತ್ತ ಮುತ್ತ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಬಸವೇಶ್ವರ ವೃತ್ತದಲ್ಲಿ ಬ್ಯಾನರ ಹಚ್ಚುತ್ತಾರೆ, ಪಾದಚಾರಿ ರಸ್ತೆಯ ಮೇಲೆ ಬೀದಿ ವ್ಯಾಪಾರಿಗಳು ಕುಳಿತು ಪಾರ್ಕಿಂಗ್‌ಗೆ ತೊಂದರೆಯಾಗುತ್ತದೆ ಎಂಬುದು ಅಂಗಡಿಕಾರರ ವಾದವಾಗಿದೆ.
ಈರಣ್ಣ ಮುಜಗೊಂಡ, ಸುನೀಲ ಪೂಜಾರಿ, ರವಿಕಾಂತ ವಾಲಿಕಾರ, ಲಕ್ಕಿ ಫುಟವೇರ್, ಬಾಲಾಜಿ ಮೊಬಾಯಿಲ್ಸ, ಎಂಟರ್‌ಪ್ರಾಯಜಿಸ್, ಆದಿತ್ಯ ಮೊಬಾಯಿಲ್ಸ, ಮಠ ಮಾಣಿಕೇಶ್ವರ, ಗೋಲ್ಡನ್ ಬೇಕರಿ ಮತ್ತಿತರರು ಪಾಲ್ಗೊಂಡಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಕೆ.ಲಕ್ಷ್ಮೀಶ ಮನವಿ ಸ್ವೀಕರಿಸಿ ಮಾತನಾಡಿ, ಪೋಲಿಸ ಇಲಾಖೆ ಜೊತೆಗೆ ಚರ್ಚಿಸಿ ಪಾರ್ಕಿಂಗ ವ್ಯವಸ್ಥೆ ಮಾಡಿಕೊಡುವದಾಗಿ ಮತ್ತು ಸಮಸ್ಯೆಗೆ ಸ್ಪಂದಿಸಿ ಪರಿಹಾರ ನೀಡುವದಾಗಿ ಭರವಸೆ ನೀಡಿದರು.