ಯರಗಟ್ಟಿ

ಗ್ರಾ ಪಂ ಅನುದಾನ ಹೆಚ್ಚಳಕ್ಕೆ ಆದ್ಯತೆ: ಕವಟಗಿಮಠ

ಗ್ರಾ ಪಂ ಅನುದಾನ ಹೆಚ್ಚಳಕ್ಕೆ ಆದ್ಯತೆ: ಕವಟಗಿಮಠ

ಲೋಕದರ್ಶನ ವರದಿ 


ಯರಗಟ್ಟಿ 19: ಎರಡು ಬಾರಿ ವಿದಾನ ಪರಿಷತ್ ಸದಸ್ಯನಾಗಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಗ್ರಾಮಗಳ ಅಭಿವೃದ್ಧಿ ಹಿತದೃಷ್ಠಿಯಿಂದ ಹಲವಾರು ಗ್ರಾಮ ಪಂಚಾಯತಿಗಳನ್ನು ಮೇಲ್ದರ್ಜಗೆರಿಸಲಾಗಿದೆ. ಮರಳಿ ಆಯ್ಕೆಯಾದರೆ  ಪ್ರತಿಯೊಂದು ಗ್ರಾ ಪಂ ಅನುದಾನವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದುದಾಗಿ ಭಾರತೀಯ ಜನತಾ ಪಾರ್ಟಿ ವಿದಾನ ಪರಿಷತ್ ಚುಣಾವನಾ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಹೇಳಿದರು. 

ಪಟ್ಟಣದ ಖಾಸಗಿ ಹೊಟೇಲ್ ಸಭಾ ಬವನದಲ್ಲಿ ಯರಗಟ್ಟಿ ತಾಲೂಕಿನ ಗ್ರಾ ಪಂ ಸದಸ್ಯರನ್ನುದೇಶಿಸಿ ಮಾತನಾಡಿದರು. 

ಉಪಸಭಾಧ್ಯಕ್ಷ ಆನಂದ ಮಾಮನಿ  ಮಾತನಾಡಿ ರಾಜ್ಯ ಮತ್ತು ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿದ್ದು ದೇಶದ ಹಿತದೃಷ್ಠಿಯಿಂದ ಹಲವಾರು ಮಹತ್ವದ ಕಾನೂನು ತಿದ್ದುಪಡಿ ಮಾಡಬೇಕಾದರೆ ವಿಧಾನ ಪರಿಷತ್ ಬಹಳ ಮುಖ್ಯವಾದದ್ದು ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಚುಣಾವನೆಯಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಸ್ಥಾನವನ್ನು ಗೆಲ್ಲಿಸುವ ಗುರಿಯನ್ನು ಜಿಲ್ಲೆಯ ಗ್ರಾ.ಪಂ.ಸದಸ್ಯರ ಮತ್ತು ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದರು. 

ಜಿ.ಪಂ.ಸದಸ್ಯರಾದ ಅಜೀತಕುಮಾರ ದೇಸಾಯಿ, ವಿದ್ಯಾರಾಣಿ ಸೊನ್ನದ, ಯಲ್ಲಮ್ಮ ಟ್ರಷ್ಟ್‌ ಅಧ್ಯಕ್ಷ ಬಸಯ್ಯ ಹಿರೇಮಠ, ತಾ.ಪಂ. ಅಧ್ಯಕ್ಷ ವಿನಯಕುಮಾರ ದೇಸಾಯಿ, ಕೆಎಮ್‌ಎಫ್ ನಿರ್ದೇಶಕ ಮಗೆಪ್ಪ ಮುಗಳಿ, ಚಂದ್ರಶೇಖರ ಸವದತ್ತಿ, ಚಂದ್ರಶೇಖರ ಅಳಗೋಡಿ, ಗೌಡಪ್ಪ ಸವದತ್ತಿ, ಈರಣ್ಣ ಚಂದರಗಿ, ವಿಠ್ಠಲಗೌಡ ದೇವರಡ್ಡಿ, ವೆಂಕಟೇಶ ದೇವರಡ್ಡಿ, ಪರ್ವತಗೌಡ ಪಾಟೀಲ, ಬಸನಗೌಡ ಪಾಟೀಲ, ಡಾ.ಶಂಕರಲಿಂಗಪ್ಪ, ಚೇತನ ಜಕಾತಿ, ಯರಗಟ್ಟಿ ತಾಲೂಕಿನ ಗ್ರಾ. ಪಂ.ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ