ಶ್ವೇತಭವನದಲ್ಲಿ ಔತನಕೂಟ ಸ್ವೀಕರಿಸಿದ ಪ್ರಧಾನಿ ಮೋದಿ
ವಾಷಿಂಗ್ಟನ್ ಡಿಸಿ 22: ಅಮೆರಿಕದ ನ್ಯೂಯಾಕರ್್ ಸಿಟಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಮುಗಿಸಿ ಕಳೆದ ರಾತ್ರಿ ನೇರವಾಗಿ ವಾಷಿಂಗ್ಟನ್ ಡಿಸಿಯಲ್ಲಿರುವ ಆಡಳಿತ ಶಕ್ತಿಕೇಂದ್ರ ಶ್ವೇತಭವನಕ್ಕೆ ಹೋದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿ ಅಮೆರಿಕದ ಪ್ರಥಮ ಮಹಿಳೆ ಎಂದು ಕರೆಯಲ್ಪಡುವ ಜಿಲ್ ಬೈಡನ್ ಸ್ವಾಗತಿಸಿದರು.
ಪ್ರಧಾನಿ ಮೋದಿಯವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಜಿಲ್ ಬೈಡನ್ ಸಾಂಪ್ರದಾಯಿಕ ಸ್ವಾಗತ ಕೋರಿದರು. ಪ್ರಧಾನಿ ಮೋದಿ ಆಗಮನಕ್ಕೆ ಅಮೆರಿಕ ಪ್ರಥಮ ಮಹಿಳೆ ಜಿಲ್ ಬೈಡನ್ ಮತ್ತು ಅವರ ತಂಡ ಭಾರತ ಪ್ರಾಂತ್ಯಕ್ಕೆ ಸಂಬಂಧಿಸಿದ ಸಂಗೀತ ಮೂಲಕ ಗೌರವ ಸೂಚಿಸಿದರು.
ಪ್ರಧಾನ ಮಂತ್ರಿಗಳ ಜೊತೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದಶರ್ಿ ವಿನಯ್ ಕ್ವಾತ್ರಾ ಮತ್ತು ಶಿಷ್ಟಾಚಾರದ ಉಪ ಮುಖ್ಯಸ್ಥ ಅಸೀಮ್ ವೋಹ್ರಾ ಅವರು ಸಹ ಶ್ವೇತಭವನಕ್ಕೆ ಹೋಗಿದ್ದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಶ್ವೇತಭವನದ ದಕ್ಷಿಣ ಭಾಗದ ಹುಲ್ಲುಗಾವಲಿನಲ್ಲಿ ಆಯೋಜಿಸಲಾದ ಔತಣಕೂಟದಲ್ಲಿ ಸಂಪೂರ್ಣ ಸಸ್ಯಾಹಾರವೇ ಮೆನುವಾಗಿತ್ತು. ಸುಮಾರು 400 ಮಂದಿ ಅತಿಥಿಗಳು ಪಾಲ್ಗೊಂಡಿದ್ದರು. ಸಿರಿಧಾನ್ಯ, ಜೋಳದ ಸಲಾಡ್ ಮತ್ತು ಸ್ಟಫ್ಡ್ ಮಶ್ರೂಮ್, ಕಲ್ಲಂಗಡಿ ಹಣ್ಣು, ಸಾಸ್ ಗಳಿದ್ದವು. ಅದರ ಜತೆಗೆ ಡಿಲ್ ಯೋಗಟರ್್ ಸಾಸ್, ಸಮರ್ ಸ್ಕ್ವ್ಯಾಷಸ್, ಮೆರಿನೇಟೆಡ್ ಮಿಲೆಟ್ಸ್, ಗ್ರಿಲ್ಡ್ ಕಾನರ್್ ಕರ್ನಲ್ ಸಲಾಡ್, ಕಂಪ್ರೆಸ್ಡ್ ವಾಟಮರ್ೆಲನ್, ಟ್ಯಾಂಗಿ ಆವಕಾಡೋ ಸಾಸ್ ಕೂಡ ಇದ್ದವು. ಮೋದಿಯವರ ಜೊತೆ ಔತಣಕೂಟದಲ್ಲಿ ಪಾಲ್ಗೊಂಡ ಅತಿಥಿಗಳಿಗೆ ಊಟದಲ್ಲಿ ಮಾಂಸಹಾರವಾಗಿ ಮೀನನ್ನು ಸೇರಿಸುವ ಆಯ್ಕೆಗಳಿದ್ದವು.
ಮೋದಿಯವರು ಸಂಪೂರ್ಣ ಸಸ್ಯಾಹಾರಿಯಾಗಿರುವುದರಿಂದ ಜಿಲ್ ಬೈಡನ್ ಅವರು ಶ್ವೇತಭವನದ ಶೆಫ್ ನೀನಾ ಕಟರ್ಿಸ್ ಅವರಿಗೆ ವಿಶೇಷ ಸೂಚನೆ ನೀಡಿ ಅಡುಗೆ ಮಾಡಿಸಿದ್ದರು.
ಔತಣಕೂಟ ಮುಗಿಸಿ ಶ್ವೇತಭವನದಿಂದ ಬೀಳ್ಕೊಡುವ ವೇಳೆ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷರು ಪರಸ್ಪರ ಆಲಂಗಿಸಿಕೊಂಡಿದ್ದು, ಪರಸ್ಪರ ಉಡುಗೊರೆಗಳ ಹಂಚಿಕೊಂಡರು.
ಹತ್ತು ಉಪನಿಷತ್ತು ತತ್ವಗಳು ಪುಸ್ತಕವನ್ನು ಮೋದಿಯವರು ಅಮೆರಿಕ ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಿದರು. ಅಲ್ಲದೆ ರಾಜಸ್ತಾನದ ಜೈಪುರದ ಶಿಲ್ಪಿ ವಿನ್ಯಾಸಗೊಳಿಸಿದ ಬೆಳ್ಳಿಯ ಗಣೇಶನ ವಿಗ್ರಹ ಮತ್ತು ದಿಯಾವನ್ನು ಒಳಗೊಂಡ ಕನರ್ಾಟಕದ ಮೈಸೂರು ಮೂಲದ ಶ್ರೀಗಂಧದ ಪೆಟ್ಟಿಗೆಯನ್ನು, ಪಶ್ಚಿಮ ಬಂಗಾಳದ ಕುಶಲಕಮರ್ಿಗಳು ತಯಾರಿಸಿದ ಬೆಳ್ಳಿಯ ತೆಂಗಿನಕಾಯಿ, ತಮಿಳು ನಾಡಿನ ಬಿಳಿ ಎಳ್ಳುಗಳನ್ನು ಉಡುಗೊರೆಯಾಗಿ ನೀಡಿದರು. ಔತಣಕೂಟ ಏರ್ಪಡಿಸಿದ ಅಮೆರಿಕ ಅಧ್ಯಕ್ಷ ಮತ್ತು ಅವರ ಪತ್ನಿಗೆ ಧನ್ಯವಾದ ಹೇಳಿದರು.