ಸಿಂಧಗಿ

ರಸ್ತೆ ಕಾಮಗಾರಿಗೆ ಅಧ್ಯಕ್ಷ ನಿಂಗಣ್ಣ ಸಾಲಿ ಭೂಮಿ ಪೂಜೆ

ರಸ್ತೆ ಕಾಮಗಾರಿಗೆ ಅಧ್ಯಕ್ಷ ನಿಂಗಣ್ಣ ಸಾಲಿ ಭೂಮಿ ಪೂಜೆ

ಸಿಂದಗಿ 09: ದಿ. ಎಮ್.ಸಿ.ಮನಗೂಳಿಯವರ ಅನುದಾನದಲ್ಲಿ ಚಿಕ್ಕ ಅಲ್ಲಾಪುರ ಗ್ರಾಮದಲ್ಲಿ 26 ಲಕ್ಷ ರೂ ಮೊತ್ತದಲ್ಲಿ ಮಂಜೂರಾದ ಸಿಸಿ ರಸ್ತೆ ಕಾಮಗಾರಿಯನ್ನು ಗ್ರಾಮ ಪಂಚಾಯತ ಅಧ್ಯಕ್ಷ ನಿಂಗಣ್ಣ ಮಲ್ಲಣ್ಣ ಸಾಲಿ ಭೂಮಿ ಪೂಜೆ ಮಾಡಿದರು.   

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ನಮ್ಮ ತಂದೆ ಅಧಿಕಾರದಲ್ಲಿ ಇದ್ದಾಗ ಅವರ ಪ್ರತಿ ಕ್ಷಣ ಈ ಕ್ಷೇತ್ರದ ಅಭಿವೃದ್ಧಿ ಪರವಾಗಿ ಆಲೋಚಿಸುತಿದ್ದರು. ಕ್ಷೇತ್ರದಲ್ಲಿನ ಅನೇಕ ಹಳ್ಳಿಗಳಲ್ಲಿ ಇಂದು ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾಗಿವೆ. ನಾನು ನನ್ನ ತಂದೆಗೆ ತಕ್ಕ ಮಗನಾಗಿ ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ನಡೆದು ಈ ಕ್ಷೇತ್ರದ ಸೇವೆ ಮಾಡಲು ಬದ್ಧನಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಜಿ ಪಂ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಶಿವು ಹತ್ತಿ, ರವಿ ದೇವರಮನಿ ಗೋಲಗೇರಿ, ಬಸವರಾಜ ಮಾರಲಭಾವಿ, ಮಹಾಬೀರ್ ಹಳಿಮನಿ, ಬಸವರಾಜ್ ಯರನಾಳ, ಮಲ್ಲಪ್ಪ ಪೂಜಾರಿ, ಬಸಪ್ಪ ನಾಯ್ಕೊಡಿ, ಬಸಲಿಂಗ ಹಿರೇಮಠ್, ಹಾಗೂ ಕಾರ್ಯಕರ್ತರು, ಮುಖಂಡರು, ಗ್ರಾಮಸ್ಥರು ಇದ್ದರು.


ಸುದ್ದಿ ಓದಿ