ಗದಗ

ಗದಗ: ಶ್ರೀ ಲಕ್ಷ್ಮೀ ಲಕ್ಷ್ಮೀ ಎಂಟರ್ ಪ್ರೈಸಸ್ ಹೆಸರಿನಲ್ಲಿ ಜನರಿಗೆ ವಂಚನೆ ಆರೋಪ

ಗದಗ: ಶ್ರೀ ಲಕ್ಷ್ಮೀ ಲಕ್ಷ್ಮೀ ಎಂಟರ್ ಪ್ರೈಸಸ್ ಹೆಸರಿನಲ್ಲಿ ಜನರಿಗೆ ವಂಚನೆ ಆರೋಪ

ಗದಗ 24: ಅಮಾಯಕ ಜನರಿಗೆ ರಿಯಾಯತಿ ದರದಲ್ಲಿ ಸೌಲಭ್ಯ. ಒದಗಿಸುವುದು ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರ ಕೊಡಿಸುವ ಆಮಿಷ ಒಡ್ಡಿ 10 ಸಾವಿರದಿಂದ 30 ಸಾವಿರ ವರೆಗೆ ಹಣ ವಂಚನೆ ಮಾಡಿರುವ ಆರೋಪಕ್ಕೆ ಗದಗ-ಬೆಟಗೇರಿ ನಿವಾಸಿ ಯಲ್ಲಪ್ಪ ಗುರಿಕಾರ ಅವರು ಶ್ರೀ ಲಕ್ಷ್ಮೀ ಎಂಟರ್ ಪ್ರೈಸಸ್ ಎಂಬ ಹೆಸರನ್ನಿಟ್ಟುಕೊಂಡು ಸಾರ್ವಜನಿಕರಿಗೆ ಮೋಸ ಮಾಡಿದ್ದು ಅವರನ್ನ ತನಿಖೆಗೆ ಒಳಪಡಿಸಬೇಕು. ಇದಕ್ಕೆ  ಸಂಬಂಧಿಸಿ ಶಿರಹಟ್ಟಿ ಪಿ ಎಸ್ ಐ ಈರಣ್ಣ ರಿತ್ತಿ ಅವರನ್ನ ಬಿಟ್ಟು ಬೆರೆಯವರನ್ನ ತನಿಖೆಗೆ ವಹಿಸಬೇಕು ಅಂತಾ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶಿವರಾಮಕೃಷ್ಣ ಸೇವಾ ಟ್ರಸ್ಟ್‌ ನ ಅಧ್ಯಕ್ಷ ರಾಜು ಖಾನಪ್ಪನವರ ಒತ್ತಾಯಿಸಿದರು.  ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಹೇಳಿಕೆ ಬಗ್ಗೆ ಸ್ವಲ್ಪ ಗಮನ ನೀಡಿ ಇಂದಿನಿಂದ ಏಳು ದಿನಗಳ ಒಳಗಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಮಾಡಲಾಗುವುದು ಅಂತಾ ರಾಜು ಖಾನಪ್ಪನವರ ಪತ್ರಿಕಾ ಗೋಷ್ಠಿ ಮೂಲಕ ಆಗ್ರಹಿಸಿದ್ದಾರೆ.  ಪತ್ರಿಕಾ ಗೋಷ್ಠಿಯಲ್ಲಿ ಶಿವಯೋಗಿ ಹಿರೇಮಠ, ವಂಚಿತರಾದ ಸೋಮಪ್ಪ ಲಮಾಣಿ, ಸುರೇಶ ಕುರಿ, ಸಂತೋಷ ಕುರಿ, ಸಂತೋಷ ಲಮಾಣಿ, ಕರಷ್ಣಪ್ಪ ತಂಬೂರಿ, ಪರಶುರಾಮ ಕುರಿ, ಶಂಕ್ರ​‍್ಪ ಲಮಾಣಿ, ಶಿವಪ್ಪ ಲಮಾಣಿ, ರಮೇಶ ಲಮಾಣಿ ಸೇರಿದಂತೆ ಇತರರಿದ್ದರು. 



ಸುದ್ದಿ ಓದಿ