ಮಳೆ ಕೊರತೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ! ಮಿತವಾಗಿ ನೀರು ಬಳಸಿ ಪಟ್ಟಣದ ಜನತೆಗೆ ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ವಿನಂತಿ
ಲಕ್ಷ್ಮೇಶ್ವರ 24: ರಾಜ್ಯದಲ್ಲಿ ಮಳೆ ಕೊರತೆಯಿಂದ ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಎದುರಿಸುವ ಸಮಸ್ಯೆ ಉಂಟಾಗಬಹುದು ಅದಕ್ಕಾಗಿ ಪಟ್ಟಣದ ಜನತೆ ನೀರನ್ನು ಮಿತವಾಗಿ ಬಳಸಬೇಕು ಎಂದು ಪಟ್ಟಣ ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರು ಪಟ್ಟಣದ ಜನತೆಗೆ ವಿನಂತಿ ಮಾಡಿ ಕೊಂಡಿದ್ದಾರೆ ಈ ಕುರಿತು ಮಾಹಿತಿ ನೀಡಿದ ಅವರು ಪ್ರಸ್ತುತ ವರ್ಷ ಕರ್ನಾಟಕದಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗಿದ್ದು, ರಾಜ್ಯದ ಬಹುತೇಕ ಭಾಗಗಳಲ್ಲಿ ಈಗಾಗಲೇ ತೀವ್ರ ನೀರಿನ ಅಭಾವ ಹಾಗೂ ಬರಗಾಲದ ಮುನ್ಸೂಚನೆಗಳು ಕಾಣಿಸಿಕೊಳ್ಳುತ್ತಿವೆ.ಮಳೆ ಕೊರತೆಯಿಂದ ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಪ್ರಮುಖ ಸಮಸ್ಯೆಗಳು ಮತ್ತು ಪರಿಸ್ಥಿತಿ ನೀರಿನ ಸಮಸ್ಯೆ ತೀವ್ರಗೊಳ್ಳಲು ಪ್ರಮುಖ ಕಾರಣ ಅಂತರ್ಜಲ ಮಟ್ಟ ಕುಸಿತ ಮಳೆ ಇಲ್ಲದೆ ಇರುವುದರಿಂದ ಭೂಮಿಯ ಒಳಗಿನ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಇದರಿಂದಾಗಿ ಬೋರ್ವೆಲ್ಗಳು ಮತ್ತು ಬಾವಿಗಳು ಬೇಗನೇ ಬತ್ತಿ ಹೋಗುತ್ತಿವೆ.ಜಲಾಶಯಗಳಲ್ಲಿ ನೀರಿನ ಕೊರತೆ ಪ್ರಮುಖ ನದಿಗಳು ಹಾಗೂ ಡ್ಯಾಂಗಳಲ್ಲಿ ನೀರಿನ ಒಳಹರಿವು ಕಡಿಮೆಯಾಗಿದೆ. ಇದು ಕೇವಲ ಕೃಷಿಗಷ್ಟೇ ಅಲ್ಲದೆ ಕುಡಿಯುವ ನೀರಿನ ಪೂರೈಕೆಗೂ ಸಂಕಷ್ಟ ತಂದೊಡ್ಡಬಹುದು ಈಗಾಗಲೇ ಬರಗಾಲ ಘೋಷಣೆ ಮಳೆಯ ಅಭಾವದಿಂದಾಗಿ ರಾಜ್ಯ ಸರ್ಕಾರವು ನೂರಾರು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಸವಾಲುಗಳು ಎಂದರೆಕುಡಿಯುವ ನೀರಿನ ತತ್ವಾರ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಬಹುದುಬೆಳೆ ಹಾನಿ ಮತ್ತು ರೈತರ ಸಂಕಷ್ಟ ಕೃಷಿ ಭೂಮಿಗೆ ಸಕಾಲದಲ್ಲಿ ನೀರು ಸಿಗದೆ ಬೆಳೆಗಳು ಒಣಗುತ್ತಿದ್ದು, ಕೃಷಿ ಉತ್ಪಾದನೆ ಕುಂಠಿತ ಗೊಳ್ಳುತ್ತಿದೆ.ಜಾನುವಾರುಗಳಿಗೆ ಮೇವಿನ ಕೊರತೆ ನೀರಿನ ಕೊರತೆಯಿಂದಾಗಿ ಹಸಿರು ಮೇವು ಸಿಗದೆ ಜಾನುವಾರುಗಳ ನಿರ್ವಹಣೆ ಕಷ್ಟಕರವಾಗಿರುವಂತಹ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ ಈ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಲು ಸಾರ್ವಜನಿಕರಾದ ನಾವು ಕೈಗೊಳ್ಳಬೇಕಾಗಿದ ಕ್ರಮ ನೀರಿನ ಮಿತಬಳಕೆ ಮನೆಯಲ್ಲಿ ದಿನಬಳಕೆಯ ನೀರನ್ನು ಅತ್ಯಂತ ಜಾಗರೂಕತೆಯಿಂದ ಮಿತವಾಗಿ ಬಳಸಬೇಕು. ನೀರು ಪೋಲು ಮಾಡುವುದನ್ನು ತಡೆಯಬೇಕು ಎಂದು ಅವರು ಪಟ್ಟಣದ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ