ಗದಗ

ಮೆಕ್ಕೆಜೋಳ ಸೇವನೆ 30 ಕುರಿಗಳು ಸಾವು ಪರಿಹಾರಕ್ಕೆ ಆಗ್ರಹ

ಮೆಕ್ಕೆಜೋಳ ಸೇವನೆ 30 ಕುರಿಗಳು ಸಾವು ಪರಿಹಾರಕ್ಕೆ ಆಗ್ರಹ

ಲಕ್ಷ್ಮೇಶ್ವರ  24:  ತಾಲೂಕಿನ ಗೋನಾಳ ಶಿಗ್ಲಿ ರಸ್ತೆಯಲ್ಲಿ ಬರುವ ಜಮೀನು ಒಂದರಲ್ಲಿ ಕುರಿಗಳನ್ನು ಮೇವುಹಿಸಲು ಬಿಟ್ಟಾಗ ಮೆಕ್ಕೆಜೋಳ ಹಾಕಿದ ಜಮೀನಿನಲ್ಲಿ ಒಕ್ಕಲಿ ಮಾಡಲಾಗಿತ್ತು ಆದರೆ ಹೊಲದಲ್ಲಿ ಬಿದ್ದಿದ್ದ  ಮೆಕ್ಕೆಜೋಳದ ತೆನೆಯ ಕಾಳನ್ನು ಸೇವನೆ ಮಾಡಿದ ಪರಿಣಾಮ 30 ಕುರಿಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.ನಿಪ್ಪಾಣಿ ಚಿಕ್ಕೋಡಿ ಮೂಲದ ಬೆನಾಡಿ ಗ್ರಾಮದ ಮಲ್ಲಪ್ಪ ಪೂಜಾರಿ ಅವರಿಗೆ ಸೇರಿದ 20 ಕುರಿಗಳು ಹಾಗೂ ಚಿಕ್ಕೋಡಿ ಮೂಲದವರಾದ ಬಾಳು ದೋಣಿ ಅವರಿಗೆ ಸೇರಿದ 10 ಕುರಿಗಳು ಸರಿ ಒಟ್ಟು 30 ಕುರಿಗಳು ಸಾವನ್ನಪ್ಪಿವೆ ಕುರಿಗಳು ಮತಪಟ್ಟ ಸ್ಥಳಕ್ಕೆ ಪಶುವೈದ್ಯಕೀಯ ಅಧಿಕಾರಿಗಳು ಆಗಮಿಸಿ ಕುರಿ ಸಾವಿನ ಬಗ್ಗೆ ಪರೀಶೀಲನೆ ನಡೆಸುತ್ತಿದ್ದಾರೆ ಸಾವೀಗೀಡಾದ ಕುರಿಗಾರರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಜಿಲ್ಲಾಧ್ಯಕ್ಷ ಹನುಮಂತ ಶರಸೂರಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. 


ಸುದ್ದಿ ಓದಿ