ಮಾ.ಪ್ರಾ. ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಚೆನ್ನಮ್ಮ ಜಯಂತಿ ಆಚರಣೆ
ಲಕ್ಷ್ಮೇಶ್ವರ 23: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಆಚರಿಸಲಾಯಿತು ಈ ಸಮಯದಲ್ಲಿ ಮಾತನಾಡಿದ ಶಾಲೆಯ ಪ್ರದಾನ ಗುರುಗಳಾದ ಬಸವರಾಜ ಕುಂಬಾರ ಅವರು ಭಾರತದ ್ರ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಕನ್ನಡಿಗರ ತಾಯಿ ಕನ್ನಡ ನಾಡಿನ ವೀರ ಮಹಿಳೆ ಕಿತ್ತೂರಿನ ಚೆನ್ನಮ್ಮ ಎಂದೆಂದಿಗೂ ಸ್ಮರಣೀಯ ಕಿತ್ತೂರು ಚೆನ್ನಮ್ಮ ಹುಟ್ಟಿದ್ದು 23ನೇ ಅಕ್ಟೋಬರ್ 1778 ರಲ್ಲಿ ಬೆಳಗಾವಿ ಜಿಲ್ಲೆಯ ಕಾಕತಿಯೆಂಬ ಊರಲ್ಲಿ ಧೂಳಪ್ಪ ಗೌಡರ್ ದೇಸಾಯಿ ಇವರ ಉದರದಲ್ಲಿ ಜನಿಸಿದಳು. ಚಿಕ್ಕವಯಸ್ಸಿನಲ್ಲಿ ಕುದುರೆ ಸವಾರಿ ಕತ್ತೆವರಸೆ ಮತ್ತು ಬಿಲ್ಲುಗಾರಿಕೆಯಲ್ಲಿ ಉತ್ತಮ ಪರಿಣಿತಿ ಹೊಂದಿದ್ದಳು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಶಟೆದು ನಿಂತು ಹೋರಾಟ ನಡೆಸಿದ್ದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಆಕೆಯ ಧೈರ್ಯ ಸಾಹಸ ಕಿಚ್ಚು ಇಂದಿಗೂ ಯುವ ಪೀಳಿಗೆಗೆ ಸ್ಪೂರ್ತಿ ದಾಯಕ ಎಂದು ಹೇಳಿದರು ಈ ಸಂದರ್ಭದಲ್ಲಿ ಶಿಕ್ಷಕರಾದ ಆರ್ಎಂ ಶಿರಹಟ್ಟಿ ಎಲ್ ಎ ಬಣಕಾರ ಆರ್ ಕೆ ಉಪನಾಳ ಶಿವರಾಜ ಸಜ್ಜನ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.