ಹೊಸ ಕಲಾವಿದರ ಶ್ರಮಕ್ಕೆ ಸಿಕ್ಕ ದೊಡ್ಡ ಗೌರವ ’ಪ್ರೇಮದ ಊರಲಿ’ ಚಿತ್ರವನ್ನು ಕುಟುಂಬ ಸಮೇತ ವೀಕ್ಷಿಸಲು ಗದಗದ ಚಿತ್ರೇ್ರಮಿ ಕೃಷ್ಣಾ ಹಡಪದ ಮುಕ್ತ ಮನವಿ
ಗದಗ 22: ಸ್ಯಾಂಡಲ್ವುಡ್ನಲ್ಲಿ ವಿಶಿಷ್ಟ ಕಥಾಹಂದರದ ಮೂಲಕ ಹೊಸ ಸಂಚಲನ ಮೂಡಿಸಿರುವ ’ಪ್ರೇಮದ ಊರಲಿ’ ಚಲನಚಿತ್ರವು ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆಪಡುವಂತಹ ಯಶಸ್ಸನ್ನು ಸಾಧಿಸಿದೆ. ಇತ್ತೀಚಿನ ವರ್ಷಗಳಲ್ಲಿ ಮಾಯವಾಗಿದ್ದ ಚಿತ್ರಮಂದಿರಗಳ ಮುಂದಿನ ಹಬ್ಬದ ಸಂಭ್ರಮ, ಹೌಸ್ಫುಲ್ ಬೋರ್ಡ್ಗಳು ಮತ್ತು ಪ್ರೇಕ್ಷಕರ ಅಭೂತಪೂರ್ವ ಜೈಕಾರ ಈ ಚಿತ್ರದ ಮೂಲಕ ಮತ್ತೆ ಮರುಕಳಿಸಿದೆ ಎಂದು ಗದಗದ ನಿವಾಸಿ ಹಾಗೂ ಅಪ್ಪಟ ಕನ್ನಡ ಚಿತ್ರೇ್ರಮಿ ಕೃಷ್ಣಾ ಎಚ್. ಹಡಪದ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಶ್ಲಾಘಿಸಿದ್ದಾರೆ.
ಗದಗಿನ ಚಿತ್ರಮಂದಿರದಲ್ಲಿ ಚಿತ್ರವನ್ನು ವೀಕ್ಷಿಸಿ ಅತ್ಯಂತ ಹರ್ಷ ವ್ಯಕ್ತಪಡಿಸಿರುವ ಅವರು, ಕಳೆದ ಸುಮಾರು ಹತ್ತು ವರ್ಷಗಳಿಂದ ಚಿತ್ರಮಂದಿರಗಳ ಮುಂದೆ ಪ್ರೇಕ್ಷಕರು ಈ ಮಟ್ಟಿಗೆ ಮುಗೀಬೀಳುವ ಹಾಗೂ ಟಿಕೆಟ್ಗಾಗಿ ಸಾಲುಗಟ್ಟಿ ನಿಲ್ಲುವ ವಾತಾವರಣ ಕ್ಷೀಣಿಸಿತ್ತು. ಆದರೆ ’ಪ್ರೇಮದ ಊರಲಿ’ ಚಿತ್ರವು ಆ ಹಳೆಯ ಸುವರ್ಣ ದಿನಗಳನ್ನು ಕಣ್ಣೆದುರಿಗೆ ತಂದಿದೆ. ಥಿಯೇಟರ್ಗಳ ಮುಂದೆ ಕನ್ನಡಿಗರು ಉತ್ಸಾಹದಿಂದ ಸೇರಿ ಸಂಭ್ರಮಿಸುತ್ತಿರುವುದನ್ನು ಕಂಡು ಕಣ್ಣುಗಳು ತುಂಬಿ ಬಂದವು. ಇದು ಕೇವಲ ಒಂದು ಸಿನಿಮಾದ ಗೆಲುವಲ್ಲ, ಬದಲಿಗೆ ನಮ್ಮ ಕನ್ನಡ ಚಿತ್ರರಂಗದ ಅಸ್ಮಿತೆ ಹಾಗೂ ಹೊಸ ಪ್ರತಿಭೆಗಳ ಪರಿಶ್ರಮಕ್ಕೆ ಸಿಕ್ಕ ದೊಡ್ಡ ಗೌರವವಾಗಿದೆ.