ಮಳೆಗಾಗಿ ಹುಲಿಗೆಮ್ಮ ದೇವಿ ಮೊರೆ ಹೋದ -ಬಿ ಟಿ ಚಂದ್ರಶೇಖರ್
ಲಕ್ಷ್ಮೇಶ್ವರ 22: ರಾಜ್ಯದಲ್ಲಿ ಆವರಿಸಿರುವ ಬರಗಾಲದಿಂದ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿರುವ ಅನ್ನದಾತರ ನೋವು ನಲಿವುಗಳನ್ನು ಅರಿತ ರಾಜ್ಯ ರೈತೋದಯ ಹಸಿರು ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ 2028ರ ವಿಧಾನಸಭಾ ಚುನಾವಣೆಯ ಸೇವಾ ಆಕಾಂಕ್ಷಿ ಬಿಟಿ ಚಂದ್ರಶೇಖರ್ ಅವರು ಮುಂದೆ ಜಾನುವಾರುಗಳಿಗೆ ಮೇವುನ ನೀರಿನ ಸಮಸ್ಯೆ ಅನ್ನದಾತದ ನೋವು ನಲಿವುಗಳನ್ನು ಅರಿತುಕೊಂಡು ಅವರು ವಿಜಯದಶಮಿಯ ಸಂದರ್ಭದಲ್ಲಿ ಆದಿಶಕ್ತಿಯ ಸ್ವರೂಪಿಯಾದ ಜಗನ್ಮಾತೆ ಹುಲಿಗೆಮ್ಮ ದೇವಿಯ ಮೋರೆ ಹೋಗಿದ್ದಾರೆ.
ಹುಲಿಗೆಮ್ಮ ತಾಯಿಗೆ ಭಕ್ತಿಯಿಂದ ಪೂಜೆಸಿ ಪ್ರಾರ್ಥಿಸಿದ ಅವರು ತಾಯಿ ಹುಲಿಗೆಮ್ಮ ದೇವಿ ನಾಡಿಗೆ ಆವರಿಸಿರುವ ಬರಗಾಲವನ್ನು ದೂರ ಮಾಡು ಮಳೆ ಬೆಳೆ ಇಲ್ಲದೆ ಕಂಗಾಲಾಗಿರುವ ರೈತರ ಜಾನುವಾರುಗಳ ಕಷ್ಟವನ್ನು ನಿವಾರಿಸಲು ನೀ ಕಣ್ಣು ತೆರೆದು ನೋಡು ಅವರ ನೋವುಗಳನ್ನು ಬಾಯಿ ಇಲ್ಲದ ಮೂಕ ಪ್ರಾಣಿಗಳಿಗೆ ಮೇವು ನೀರಿನ ಕೊರತೆ ಯಾಗದಂತೆ ಹಿಂಗಾರಿನ ಬೆಳೆಗಾದರೂ ಉತ್ತಮ ಮಳೆ ಸುರಿಸಿ ಸಂಕಷ್ಟದಲ್ಲಿರುವ ಅನ್ನದಾತರನ್ನು ಪ್ರಾಣಿ ಪಕ್ಷಿಗಳನ್ನು ರಕ್ಷಿಸು ಎಂದು ಬೇಡಿಕೊಂಡರು