ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಜ್ಞಾನವರ್ಧಕ ಶರಣ ಸಂಸ್ಕೃತಿ ಉತ್ಸವ
ಗದಗ 24 : ಚಿತ್ರದುರ್ಗದಲ್ಲಿನ ಜಗದ್ಗುರು ಮುರುಘರಾಜೇಂದ್ರ ಬೃಹನ್ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವದ ಕಾರ್ಯಕ್ರಮದಲ್ಲಿ ಗದುಗಿನ ಪ್ರಜಾಪಿತ ಬ್ರಹಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರ ಸೇವೆಯನ್ನ ಗುರುತಿಸಿ ಮಠದ ಬಸವಕುಮಾರ ಸ್ವಾಮಿಜೀ, ಮಲ್ಲಿಕಾರ್ಜುನ ಸ್ವಾಮಿಜೀ, ಬಸವ ಪ್ರಭು ಸ್ವಾಮೀಜಿ,ಚಿತ್ರದುರ್ಗದ ಮಾಜಿ ಶಾಸಕರಾದ ಜಿ. ಹೆಚ್ ತಿಪ್ಪರೆಡ್ಡಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ (ಐ. ಎ. ಎಸ್) ಹಾಗೂ ಅನೇಕ ಶರಣರು, ಪೂಜ್ಯರು, ಶಾಸಕರು ವಿಶೇಷವಾಗಿ ಸನ್ಮಾನಿಸಿ ಸತ್ಕರಿಸಿದರು. ಇದೇ ಸಂದರ್ಭದಲ್ಲಿ ಜಯಂತಿ ಅಕ್ಕನವರು ಈಶ್ವರೀಯ ಸಂದೇಶವನ್ನು ನೀಡಿ, ಓಂ ನಮಃ ಶಿವಾಯ ಮಹಾಮಂತ್ರದ ಅರ್ಥ ತಿಳಿಸಿ ಶಿವಧ್ಯಾನ ಮಾಡಿಸಿದರು.