ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಹಮ್ಮಿಕೊಂಡ ವೀರ ವನಿತೆ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಡಾ.ಶಾಂತವೀರ ಮನಗೂಳಿ ಉದ್ಘಾಟಿಸಿದರು.
ಸಿಂದಗಿ 23: ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ, ಕರ್ನಾಟಕದ ಕಿತ್ತೂರಿನ ಸರ್‌ದೇಸಾಯಿ ರಾಜಮನೆತನದೆಂದರೆ ಸಾಹಸಮಯವಾದ ಮನೆತನ ಆದಿಶಾಹಿ ಅವರ ಜೊತೆ 6 ವರ್ಷ ಯುದ್ಧ ಮಾಡಿದ ಅಲ್ಲಪ್ಪ ಗೌಡರ ಮನೆತನ ರಾಣಿ ಚನ್ನಮ್ಮಾಳರಿಗೆ ಆದ್ಯಾತ್ಮದ ಜೊತೆಗೆ ಸಾಮಾಜ್ಯ ಸ್ಥಾಪಿಸುವುದು ಹೇಗೆ ಎನ್ನುವುದು ರಕ್ತಗತವಾಗಿ ಬಂದಿರುವಂತದ್ದು ಇಂತಹ ಮಹಾನ್ ತಾಯಿ ತ್ಯಾಗ, ಹೋರಾಟ, ತತ್ವಾದರ್ಶ, ಜೀವನ ಚರಿತ್ರೆ ಇಂದಿನ ಯುವಕರಲ್ಲಿ ತಿಳಿಸುವುದು ಕಾರ್ಯ ಮಹತ್ವದಾಗಿದೆ ಎಂದು ದಾರವಾಡ ಕೆರಿಯರ ಅಕಾಡೆಮಿ ಉಪನ್ಯಾಸ ರಂಘನಾಥ ತೋರ್ಫೆ ಹೇಳಿದರು. ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮಳ 248ನೇ ಜಯಂತ್ಯೋತ್ಸವ ಹಾಗೂ 202ನೇ ವಿಜಯೋತ್ಸವ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ರುದ್ರಮಲ್ಲ ದೇಸಾಯಿ ಮತ್ತು ಟ್ಯಾಕ್ರೆನ ಜೊತೆ ಒಳ್ಳೆಯ ಸಂಭಂದ ಹೊಂದಿದ್ದರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಇದ್ದರೆ ಇತಿಹಾಸದಲ್ಲಿ ಯಾವ ತಪ್ಪುಗಳಾಗಿದೆಯೋ ವಾಸ್ತವದಲ್ಲಿ ಅದೇ ತಪ್ಪುಗಳಾಗುತ್ತವೆ. ಟ್ಯಾಕ್ರೆ ಇಂದ ಸಾಮಾಜ್ಯವನ್ನು ಉಳಿಸಿಕೊಳ್ಳುವುದಕ್ಕೆ ಬಹಳಷ್ಟು ಬಳಲುತ್ತಾಳೆ. ಝಾನ್ಸಿ ಲಕ್ಷ್ಮೀಬಾಯಿ ಅವರು ಕೊಟ್ಟಂತ ಗೌರವ ಆ ಇತಿಹಾಸ ಉಳಿಸಿಕೊಳ್ಳುವದಕ್ಕೆ ನಮ್ಮವರು ಮಾಡದೇ ಇರುವುದಕ್ಕೆ ಇದುವೇ ಸಾಕ್ಷಿ. ಅವರ ಶೌರ್ಯ ಸಾಹಸ ಮೆಚ್ಚುವಂತದ್ದು. ಅವರ ಇತಿಹಾಸ ಪುಸ್ತಕ ರೂಪದಲ್ಲಿ ಬರಬೇಕಾಗಿತ್ತು ಅದು ಇಂದಿನ ಯುವ ಪೀಳೀಗೆ ಇತಿಹಾಸ ಮರುಕಳೀಸದಂತಾಗುತ್ತಿತ್ತು ಎನುವುದು ವಾಸ್ತವ ಸತ್ಯ. ಅಂತವರ ವಿರುದ್ದ ಬಂಡೆದ್ದು ನಿಂತವಳು ಚೆನ್ನಮ್ಮಾಜಿ ಅವರು ಸ್ವತಂತ್ರ ಸಂಗ್ರಾಮ ಹೋರಾಟದ ಪ್ರೇರಣೆ ನೀಡಿದ ಚೆನ್ನಮ್ಮಳ ಆದರ್ಶಗಳನ್ನು ಇಂದಿನ ಯುವ ಪೀಳೀಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭಾರತ ದೇಶದ ಪರಂಪರೆಯನ್ನು ಮೆರೆಯಬೇಕಾಗಿರುವುದು ಅತ್ಯವಶ್ಯಕವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ ತಹಶೀಲ್ದಾರ ಕರೇಪ್ಪ ಬೇಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಸವರಾಜ ಸೊಂಪೂರ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಚೆನ್ನಮ್ಮಾಜಿ ವೃತ್ತದಲ್ಲಿ ಶಾಸಕ ಅಶೋಕ ಮನಗೂಳಿ ಅವರು ಚೆನ್ನಮ್ಮಾಜಿ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಾನಿಧ್ಯತೆ ಆಸಂಗಿಹಾಳ ಆರೋಢಮಠದ ಶಂಕ್ರರಾನಂದ ಮಹಾಸ್ವಾಮಿಗಳು, ಬಿಇಓ ಟಿ.ಎಸ್.ಆಲಗೂರ, ನಗರಸಭೆ ಪೌರಾಯುಕ್ತ ರವಿ ಶಿರಗುಪ್ಪಿ, ಸೋಮನಗೌಡ ಬಿರಾದಾರ, ವ್ಹಿ.ಬಿ.ಕುರಡಿ, ನೂರಹ್ಮದ ಅತ್ತಾರ, ರವಿ ಬಿರಾದಾರ, ನಿಂಗನಗೌಡ ಪಾಟೀಲ, ಕಾಳಣ್ಣ ಬಗಲಿ, ಅಂಬರೀಶ ಚೌಗಲೆ, ಪ್ರತಿಬಾ ಚಳ್ಳಗಿ, ಬಸವರಾಜ ಐರೋಡಗಿ ಸೇರಿದಂತೆ ಅನೇಕರಿದ್ದರು.