ವಿದ್ಯಾರ್ಥಿಗಳ ವ್ಯಕ್ತಿತ್ವ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಸಹಾಯಕವಾಗಿದೆ: ಪಾಟೀಲ
ಇಂಡಿ:ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಪ್ರಕಾಶಿಸುವಂತೆ ಮಾಡುತ್ತವೆ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರಸಮನ್ವಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಹಡಪದ ಅಪ್ಪಣ್ಣ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳ ವ್ಯಕ್ತಿತ್ವದ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಸಹಾಯವಾಗುತ್ತದೆ. ಮಕ್ಕಳಲ್ಲಿಯ ಪ್ರತಿಭೆಯನ್ನು ಹೊರ ತರುವದು ಪ್ರತಿಭಾ ಕಾರಂಜಿಯಾಗಿದೆ. ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಮಕ್ಕಳ ಪ್ರತಿಭೆ ಹೊರತರಲು ಅವಕಾಶ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ವಿಶ್ವಮಟ್ಟಕ್ಕೆ ಒಯ್ಯುವ ಅವಕಾಶ ಇದಾಗಿದೆ ಎಂದರು.
ಶಿಕ್ಷಣ ಸರಳೀಕರಣ ಆಗಬೇಕಾಗಿದೆ. ಮಾನವ ಸಂಪನ್ಮೂಲ ಇಲಾಖೆ ಮಕ್ಕಳ ಶಿಕ್ಷಣ ಕುರಿತು ಹೊಸ ಅವಿಷ್ಕಾರದತ್ತ ಸಾಗಬೇಕಾಗಿದೆ. ಮಕ್ಕಳನ್ನು ಹೊಸ ದಿಕ್ಕಿನಲ್ಲಿ ಒಯ್ಯಬೇಕಾಗಿದೆ. ಗುಣಾತ್ಮಕ ಶಿಕ್ಷಣ ಮತ್ತು ಶಿಕ್ಷಕರ ಪರಿಪೂರ್ಣತೆಯಿಂದ ಮಾಡಬೇಕಾಗಿದೆ.
ಗತಿಸಿ ಹೋದ ಸಂಸ್ಕಾರ ಮಕ್ಕಳಲ್ಲಿ ಉಳಿಸಬೇಕಾಗಿದೆ, ತಿಳಿಸಬೇಕಾಗಿದೆ, ಮುಂದುವರೆಸಬೇಕಾಗಿದೆ. ಶಿಕ್ಷಣ ಮಕ್ಕಳ ಭವಿಷ್ಯದ ಅವಿಭಾಜ್ಯ ಅಂಗ, ಸಂಸ್ಕೃತಿಯ ಶಿಕ್ಷಣ ನೀಡುವ ಮೂಲಕ ಶಿಕ್ಷಣ ಸಂಸ್ಥೆಗಳು ಮಾದರಿಯಾಗಬೇಕಾಗಿದೆ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ, ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಆರ್.ನಡಗಡ್ಡಿ, ಬಿ.ವಾಯ್.ಗೊರನಾಳ ಮಾತನಾಡಿದರು.
ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷೆ ಬನ್ನೆಮ್ಮ ಹದರಿ,ಶಾಲೆಯ ಆಡಳಿತಾಧಿಕಾರಿ ಪಂಡಿತ ಬಿರಾದಾರ, ಹಡಪದ ಅಪ್ಪಣ್ಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ದು ನಾವಿ, ಪ್ರೌಢಶಾಲೆ ಮುಖ್ಯ ಗುರುಮಾತೆ ಜಯಶ್ರೀ ಗೌಡ, ಪ್ರಾಥಮಿಕ ವಿಭಾಗದ ಭವಾನಿಗೌಡ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಡಿ.ಪಾಟೀಲ, ಸತೀಶ ಕುಂಬಾರ, ಜಾವೇದ ಮೋಮಿನ್, ಪ್ರಶಾಂತ ಕಾಳೆ, ಭೀಮು ಕವಲಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ.ಹರಳಯ್ಯ, ಇ.ಓ.ಹೂಗಾರ, ನೊಡಲ ಅಧಿಕಾರಿ ಸಂತೋಷ ಪಾಟೀಲ, ಶಕುಂತಲಾ ನಾವಿ, ರಮೇಶ ಬಡಿಗೇರ, ನಟರಾಜ ಗವಳಿ, ಸಂತೋಷ ನಾವಿ, ಧೂಳಪ್ಪ ನಾವಿ, ಶಿವಾನಂದ ನಾವಿ, ಸಿದರಾಯ ಅಪ್ತಾಗಿರಿ, ವೈ.ಜಿ.ಬಿರಾದಾರ ಮತ್ತಿತರರು ಇದ್ದರು.