ಇಂಡಿ

ಲಿಂಗಗಳ ಪ್ರಾಣ ಪ್ರತಿಷ್ಠಾಪನೆ

ಲಿಂಗಗಳ ಪ್ರಾಣ ಪ್ರತಿಷ್ಠಾಪನೆ

ಇಂಡಿ: ಸಿದ್ಧಾರೂಢರಲ್ಲಿ ನಂಬಿಕೆ ಇಟ್ಟು, ಸದ್ಭಕ್ತಿಯಿಂದ ನಡೆದುಕೊಂಡರೆ ಶ್ರೀಗಳು ಸಕಲ ಇಷ್ಟಾರ್ಥಗಳನ್ನು ಈಡೇರುಸುತ್ತಾರೆ. ಮೌಢ್ಯಗಳನ್ನು ಸಮಾಜದಿಂದ ತೊಲಗಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಿದ್ಧಾರೂಢರು ಅವಿರತವಾಗಿ ಶ್ರಮಿಸಿದ್ದಾರೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಹೇಳಿದರು. 

ಅವರು ರವಿವಾರ ತಾಲೂಕಿನ ಅಗರಖೇಡ ಗ್ರಾಮದ ಸಿದ್ದಾರೂಢ ಮಠದಲ್ಲಿ 108 ಲಿಂಗಗಳ ಪ್ರಾಣ ಪ್ರತಿಷ್ಠಾಪನೆಯ ಧರ್ಮಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 

ಸಿದ್ಧಾರೂಢರು ಮನುಷ್ಯನ ಭವ ಬಂದನವನ್ನು ಬಿಡಿಸಿ, ಅಸಾಮಾನ್ಯರನ್ನು ತಿದ್ದಿ ಸತ್ಯ ಮಾರ್ಗದಲ್ಲಿ ನಡೆದು ಮುಕ್ತಿ ಮಾರ್ಗ ತೋರಿಸಿದ್ದಾರೆ. ಸಂತ ಶಿಶುನಾಳ ಶರೀಫರು, ನಾಗಲಿಂಗರು, ಮಡಿವಾಳಪ್ಪನವರು ಸಿದ್ಧಾರೂಢರ ವಿಚಾರ ಶಕ್ತಿಗೆ ಮನಸೋತು ಸತ್ಯ, ಧರ್ಮ ಜನರಿಗೆ ಉಣಬಡಿಸಿ ಮುಕ್ತಿ ಪಡೆದವರು ಎಂದರು. 

ಕಾರ‌್ಯಕ್ರಮದ ಸಾನಿಧ್ಯವಹಿಸಿದ ಬಾಗಲಕೋಟದ ಪರಮರಾಮರೂಢರು ಮಾತನಾಡಿ, ಸಿದ್ಧಾರೂಢರು ಸರ್ವ ಜನಾಂಗದ ಹಿತವನ್ನು ಕಾಪಾಡಿದ ಮಹಿಮಾಶಾಲಿಗಳು. ಸಂಸಾರಿಕ ಜೀವನ ಸಾಗಿಸುವರಿಗೆ ಸಂಸಾರದಲ್ಲಿ ಇದ್ದು ಪಾರಮಾರ್ಥಿಕ ಸಾಧನೆ ಮಾಡುವ ಮಾರ್ಗ ತಿಳಿಸಿ. ಭಕ್ತರ ಪಾಲಿನ ಕಾಮಧೇನು ಕಲ್ಪವೃಕ್ಷರಾಗಿದ್ದಾರೆ ಎಂದು ತಿಳಿಸಿದರು. 

ವೇದಿಕೆಯಲ್ಲಿ ಆಳೂರ ಸಿದ್ಧಾರೂಢ ಮಠದ ಶಂಕರನಂದ ಶ್ರೀಗಳು, ಇಂಡಿಯ ಸಿದ್ಧಾರೂಢಮಠದ ಸ್ವರೂಪಾನಂದ ಶ್ರೀಗಳು, ಕೆಂದೂರದ ಆತ್ಮಾನಂದ ಶ್ರೀಗಳು, ಮುಮ್ಮಟಗೇರಿಯ ಆತ್ಮಾನಂದ ಶ್ರೀಗಳು, ಮಾತೋಶ್ರೀ ಶರಣಮ್ಮ ತಾಯಿ, ಚಂದ್ರಶೇಖರ ಶಾಸ್ತ್ರಿಗಳು, ಬಾಬು ಮಹಾರಾಜರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಣಮಂತ ಖಂಡೆಕರ, ಮಾಜಿ ತಾಲೂಕಾ ಪಂಚಾಯತ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ, ಮಾಜಿ ಗ್ರಾಪಂ ಅಧ್ಯಕ್ಷ ವಿಠ್ಠಲಗೌಡ ಪಾಟೀಲ, ಸಿದ್ದು ಡಂಗಾ, ಡಾ. ರಮೇಶ ರಾಠೋಡ, ವ್ಹಿ.ಜಿ. ಕಲ್ಮನಿ ಸೇರಿದಂತೆ ಅನೇಕರು ಇದ್ದರು. ತಾಲೂಕಿನ ಅಗರಖೇಡ ಗ್ರಾಮದ ಸಿದ್ದಾರೂಢ ಮಠದಲ್ಲಿ 108 ಲಿಂಗಗಳ ಪ್ರಾಣ ಪ್ರತಿಷ್ಠಾಪನೆಯ ಧರ್ಮಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಬಿ.ಡಿ. ಪಾಟೀಲ ಮಾತನಾಡಿದರು. 


ಸುದ್ದಿ ಓದಿ