ಜುಲೈ 1ರಿಂದ ಪ್ಲಾಸ್ಟಿಕ್ ವಸ್ತು ನಿಷೇಧ: ಲಕ್ಷ್ಮೇಶ
ಇಂಡಿ: ಈಗಾಗಲೆ ಸರಕಾರ ಪ್ಲಾಸ್ಟಿಕ್ ಬ್ಯಾನ್ ಮಾಡಿದರೂ ಸಹಿತ ಬಹಳಷ್ಟು ಅಂಗಡಿಕಾರರು ಇನ್ನೂ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಜುಲೈ 1 ರಿಂದ ಒಂದು ಭಾರಿ ಬಳಸುವ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧ ಮಾಡಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮೇಶ ಎನ್ ತಿಳಿಸಿದರು.
ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ಲಾಸ್ಟಿಕ್ ಕವರ್, ಸ್ಟ್ರಾಗಳು, ಕಟ್ಲೆರಿ, ಸಂಸ್ಕರಿತ ಆಹಾರ ಪಾಕೇಟ್, ಇತ್ಯಾದಿಗಳು ಒಮ್ಮೆ ಮಾತ್ರ ಬಳಸುವ ಪ್ಲಾಸ್ಟಿಕ್ ವಸ್ತುಗಳಾಗಿವೆ. ಅದರಲ್ಲೂ ನೊರೆಯುಕ್ತ ಪ್ಲಾಸ್ಟಿಕ್ ವಸ್ತುವಿನಿಂದ ಮಾಡಿದ ವಸ್ತುಗಳಾದ ಪ್ಲಾಸ್ಟಿಕ್ ಪ್ಲೇಟ, ಕಪ್ ಇತ್ಯಾದಿಗಳಿಂದ ಪರಿಸರಕ್ಕೆ ಭಾರಿ ಹಾನಿಯಾಗುತ್ತದೆ. ಹೀಗಾಗಿ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇದಿಸಲಾಗಿದೆ ಎಂದರು.
ವಿಶ್ವ ಪರಿಸರ ದಿನದಂದು ಭಾರತ ಪ್ಲಾಸ್ಟಿಕ ವಸ್ತು ನಿಷೇದಿಸಲು ನಿರ್ಧರಿಸಿತು. ಅದರಂತೆ ಜು. 1ರಿಂದ ಪ್ಲಾಸ್ಟಿಕ ಬಳಕೆ ಮಾಡಿದರೆ 5 ಸಾವಿರ ದಂಡ ವಿಧಿಸಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.