ವಿಜಯಪುರ

ಕಾರ್ಮಿಕ ಇಲಾಖೆಯ ಆದೇಶದಂತೆ ವೇತನ ಪಾವತಿಸಿ: ಶಂಕರ ಭೂವಿನ

ಕಾರ್ಮಿಕ ಇಲಾಖೆಯ ಆದೇಶದಂತೆ ವೇತನ ಪಾವತಿಸಿ: ಶಂಕರ ಭೂವಿನ

ಲೋಕದರ್ಶನ ವರದಿ 

             ತಿಕೋಟಾ 17 : ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚ ನೌಕರರರಾದ ಕ್ಲರ್ಕಂ ಕಂ ಡಾಟಾ ಎಂಟ್ರಿ ಆಪರೇಟರ್, ಕರ ವಸೂಲಿಗಾರ, ನೀರುಗಂಟಿ, ಜವಾನ ಮತ್ತು ಸ್ವಚ್ಛತಗಾರರು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆನಂದಕುಮಾರ ಮ್ಯಾಗೇರಿ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು. 

ಪಂಚ ನೌಕರರ ಕ್ಷೇಮಾಭಿವೃದ್ಧಿ ಸಂಘದ ಶಂಕರ ಭೂವಿನ ಅವರು ಮಾತನಾಡಿ “ಗ್ರಾಮ ಪಂಚಾಯಿಗಳಲ್ಲಿ ಸೇವೆಗೆ ಸೇರಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಮತ್ತು ಗ್ರಾಮೀಣ ಜನರ ದೈನಂದಿನ ಮೂಲಸೌಕರ್ಯ, ಕುಡಿಯುವ ನೀರು, ಸ್ವಚ್ಛತೆ, ಹಾಗೂ ಪಂಚಾಯತಿ ಆಡಳಿತವನ್ನು ಹಗಲಿರುಳು ಮುನ್ನಡೆಸುತ್ತಿರುವ ನೌಕರರ ಬದುಕು ತೀರಾ ಸಂಕಷ್ಟದಲ್ಲಿದೆ.

        ದಿನಾಂಕ: 22.05.2026ರಂದು ಕಾರ್ಮಿಕ ಇಲಾಖೆಯ ಅಧಿಸೂಚಿಸಿರುವಂತೆ ನಮ್ಮ ವೇತನವನ್ನು ಗ್ರಾಮ ಪಂಚಾಯತಿಗಳು ನೀಡುತ್ತಿಲ್ಲ. ಕಾರ್ಮಿಕ ಇಲಾಖೆಯಂತೆ ವೇತನ ನೀಡಲು ಹೈಕೋರ್ಟ್‌ ಸಹ ಆದೇಶ ನೀಡಿರುತ್ತದೆ. ಹಾಗೂ ಸರಕಾರದಿಂದ ಹೆಚ್ಚುವರಿ ಅನುದಾನ ಬರದೇ ಇದ್ದ ಪಕ್ಷದಲ್ಲಿ ಗ್ರಾಮ ಪಂಚಾಯತಿ ಸ್ವಂತ ಸಂಪನ್ಮೂಲದಿಂದ ಅನುದಾನ ಬಳಸಿಕೊಂಡು ಸಿಬ್ಬಂದಿಗಳ ವೇತನ ಪಾವತಿಸಲು ಸಹ ಆದೇಶವಿರುತ್ತದೆ.

            ಹೀಗಾಗಿ ಎಲ್ಲ ನೌಕರರ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಸದರಿ ಕಾರ್ಮಿಕ ಇಲಾಖೆಯ ಆದೇಶದಂತೆ ವೇತನ ಪಾವತಿಸಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲು ವಿನಂತಿಸಿ ಮನವಿ ಪತ್ರ ಸಲ್ಲಿಸುತ್ತಿದ್ದೇವೆ ಎಂದರು. 


ಸುದ್ದಿ ಓದಿ