ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣ ಮಾಡಲು ಸೂಕ್ತ ವೇದಿಕೆ ಪ್ರತಿಭಾ ಕಾರಂಜಿ- ಬಿ.ಆರ್.ಯಂಟಮಾನ
ಆಲಮೇಲ 17: ಪಟ್ಟಣದ ಪಿ.ಎಂ.ಶ್ರೀ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಆಲಮೇಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಜರುಗಿತು. ಸಸಿಗೆ ನಿರೂಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಶಾಲಾ ಮೇಲುಸ್ತುವಾರಿ ಅಧ್ಯಕ್ಷರು ಹಾಗೂ ಮಾಜಿ ಜಿ.ಪಂ.ಸದಸ್ಯರು ಬಿ.ಆರ್.ಯಂಟಮಾನ ರವರು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಸೂಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಅನಾವರಣ ಗೊಳಿಸುವ ಸೂಕ್ತವಾದ ವೇದಿಕೆ.ಗ್ರಾಮೀಣ ಭಾಗದ ಮಕ್ಕಳಲ್ಲಿ ಪ್ರತಿಯೊಂದು ಮಗುವಿನಲ್ಲಿಯೂ ಒಂದಲ್ಲ ಒಂದು ವಿಶೇಷ ಪ್ರತಿಭೆ ಅಡಗಿರುತ್ತದೆ. ಕೆಲವರಲ್ಲಿ ಹಾಡುವ ಕಲೆ, ಕೆಲವರಲ್ಲಿ ನೃತ್ಯ, ಅಭಿನಯ, ಭಾಷಣ, ಚಿತ್ರಕಲೆ, ಕಥೆ ಹೇಳುವ ಕಲೆ, ಕವನ ವಾಚನ, ಆಶುಭಾಷಣ ಹಾಗೂ ಸಾಹಿತ್ಯಿಕ ಅಭಿರುಚಿಗಳು ಅಡಗಿರುತ್ತವೆ. ಇಂತಹ ಪ್ರತಿಭೆಗಳಿಗೆ ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ದೊರೆತಾಗ ಮಾತ್ರ ಅಂತಹ ಮಕ್ಕಳು ಬೆಳಕಿಗೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಕಲ್ಪಿಸುತ್ತದೆ.
ಆಲಮೇಲ ತಾಲೂಕು ಪ್ರಾ.ಶಾ..ಶಿ.ಸಂಘದ ಉಪಾಧ್ಯಕ್ಷ ಡಿ.ಎಮ್.ಮಾವೂರ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವುದು ಶಿಕ್ಷಕರ ಕರ್ತವ್ಯವಾದರೆ, ಆ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಪ್ರತಿಭಾ ಕಾರಂಜಿ ಮಕ್ಕಳ ಕನಸುಗಳಿಗೆ ರೆಕ್ಕೆ ನೀಡುವ, ಆತ್ಮವಿಶ್ವಾಸಕ್ಕೆ ಬಲ ತುಂಬುವ ಹಾಗೂ ಭವಿಷ್ಯದ ಪ್ರತಿಭಾವಂತ ಕಲಾವಿದರು, ಸಾಹಿತಿಗಳು ಮತ್ತು ಸಾಧಕರನ್ನು ರೂಪಿಸುವ ಅಮೂಲ್ಯ ವೇದಿಕೆಯಾಗಿದೆ.
ಈ ವೇಳೆ ಶಿವಾನಂದ ಪಡಶೆಟ್ಟಿ, ಎಂ.ಎಚ್.ಚೌಧರಿ, ಗಿರಿಧರ ಗತಾಟೆ, ಡಿ.ಎಂ.ಮಾವೂರ, ಸಿ.ಆರಿ್ಪ.ಎಸ್.ಆರ್.ಮುಲ್ಲಾ, ಮಲ್ಲಿಕಾರ್ಜುನ ಕೊಳಾರಿ, ಎಸ್.ಬಿ.ಶಿರಶ್ಯಾಡಕರ, ಆರ್.ಎಂ.ಬಿರಾದಾರ, ಹಣಮಂತ ಅಗಸರ, ಅಂಬಣ್ಣ ತಳಕೇರಿ, ಅನಂತ ಪಾಟೀಲ, ಶ್ರೀಕಾಂತ ಜೋಶಿ, ಸಿದ್ದಾರಾಮ ಮಳ್ಳಿ, ಜಿ.ಕೆ.ಅಂಬೂರೆ ಮುಂತಾದವರು ಉಪಸ್ಥಿತರಿದ್ದರು.