ಇಂಡಿ

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ವಿಪಕ್ಷ ಸ್ಥಾನ ನೀಡಬೇಕು : ಕಾಸುಗೌಡ ಬಿರಾದಾರ್

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ವಿಪಕ್ಷ ಸ್ಥಾನ ನೀಡಬೇಕು : ಕಾಸುಗೌಡ ಬಿರಾದಾರ್

ಲೋಕದರ್ಶನ ವರದಿ

ಇಂಡಿ 23: ವಿಜಯಪುರ ನಗರ ಶಾಸಕ ಹಿಂದೂ ಫೈಯರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ವಿಪಕ್ಷ ನಾಯಕ ಮಾಡಬೇಕೆಂದು ವರಿಷ್ಠರಲ್ಲಿ ವಿನಂತಿಸಿಕೊಳ್ಳುವುದಾಗಿ ಬಿಜೆಪಿ ಇಂಡಿ ಮತಕ್ಷೇತ್ರದ ಪರಾಭವ ಅಭ್ಯರ್ಥಿ ಕಾಸುಗೌಡ ಬಿರಾದಾರ್ ಹೇಳಿದರು.

      ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ  ಬಸವನಗೌಡ ಪಾಟೀಲ್ ಯತ್ನಾಳ್ ಅವರು ನೇರ ನಡೆ-ನುಡಿಯ ಮೂಲಕ ರಾಜ್ಯದ ಜನರ ಮನ-ಮಾನಸದಲ್ಲಿ ಉಳಿದುಕೊಂಡಿದ್ದಾರೆ. ರಾಜ್ಯಾದ್ಯಾಂತ ಅಭಿಮಾನಿ ಬಳಗವನ್ನು ಹೊಂದಿದ್ದಾರಲ್ಲದೆ ಪ್ರಖರ ಹಿಂದುತ್ವವನ್ನು ಪರಿಪಾಲಿಸುತ್ತಾರೆ. ಅವರಿಗೆ ವಿಪಕ್ಷ ಸ್ಥಾನ ನೀಡಿದ್ದೆ ಆದಲ್ಲಿ ಅವರ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಾರೆ. ಅಲ್ಲದೆ ಪಕ್ಷ ಸಂಘಟನೆಯಲ್ಲಿಯೂ ಸಹ ಅವರು ಶ್ರಮವಹಿಸುತ್ತಾರೆ. ಆಡಳಿತಾರೂಢ ಪಕ್ಷದ ತಪ್ಪನ್ನು ಎತ್ತಿ ತೋರಿಸಿ ಜನರ ಮುಂದೆ ಇಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಅವರಿಗೆ ವಿಪಕ್ಷ ನಾಯಕ ಮಾಡಿದರೆ ಪಕ್ಷಕ್ಕೆ ದೊಡ್ಡ ಲಾಭವಾಗಲಿದೆ. ರಾಜ್ಯದ ಹಾಗೂ ರಾಷ್ಟ್ರದ ಬಿಜೆಪಿ ಮುಖಂಡರು ಬಸನಗೌಡ ಪಾಟೀಲ ಯತ್ನಾಳರನ್ನು ವಿಪಕ್ಷ ಸ್ಥಾನದಲ್ಲಿ ಕೂರಿಸಬೇಕೆಂದು ಮಾಧ್ಯಮಗಳ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದು ಬಿರಾದಾರ್ ತಿಳಿಸಿದ್ದಾರೆ 

ಸುದ್ದಿ ಓದಿ