ಇಂಡಿ

ಭೀಮಾ ನದಿಗೆ ಒಂದು ಲಕ್ಷ ಕ್ಯೂಸೆಕ್ಸ ನೀರು

ಭೀಮಾ ನದಿಗೆ ಒಂದು ಲಕ್ಷ ಕ್ಯೂಸೆಕ್ಸ ನೀರು

ಇಂಡಿ 14: ಮಹಾರಾಷ್ಟ್ರದ ಪುಣೆ ಪರಿಸರದ ಭೀಮಾ ಶಂಕರಿ ಮತ್ತು ಮಹಾಬಳೇಶ್ವರ ಪರಿಸರದಲ್ಲಿ ಮಳೆ ಹೆಚ್ಚಾದ ನಿಮಿತ್ಯ ಭೀಮಾ ನದಿಗೆ ಉಜನಿ ಜಲಾಶಯದಿಂದ 60 ಸಾವಿರ ಕ್ಯೂಸೆಕ್ಷ ನೀರು ಮತ್ತು ಸಾತಾರ ಜಿಲ್ಲೆಯಲ್ಲಿ ಮಳೆ ಯಾಗುತ್ತಿತುವ ನಿಮಿತ್ಯ  ನೀರಾ ನದಿಯ ವೀರಭಟಕರ ಜಲಾಶಯದಿಂದ 40 ಸಾವಿರ ಕ್ಯೂಸೆಕ್ಸ ನೀರು ಭೀಮಾ ನದಿಗೆ ಬಿಟ್ಟಿದ್ದಾರೆ ಎಂದು ಇಂಡಿಯ ಕಂದಾಯ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ತಿಳಿಸಿದ್ದಾರೆ.

ಇಂದು ಗೋವಿಂದಪುರ- ಭಂಡರಕವಟೆ, ಉಮರಾಣಿ- ಲವಂಗಿ, ಹಿಂಗಣಿ  ಅಳ್ಳಗಿ, ಚಣೆಗಾಂವ- ಬರೂರ ಬ್ಯಾರೇಜಗಳಿಗೆ ಭೇಟಿ ನೀಡಿದರು. 

ಇಂಡಿ, ಚಡಚಣ, ಆಲಮೇಲ, ಸಿಂದಗಿ ತಾಲೂಕಿನ  ಸಮೀಪದ ಗ್ರಾಮಗಳಿಂದ  ಸೋಲಾಪುರದ ಗ್ರಾಮಗಳಿಗೆ ಹೋಗಲು ಈ ಬ್ಯಾರೆಜಗಳ ಮೇಲಿಂದ ಹೋಗುತ್ತಿದ್ದರು. ಹೀಗಾಗಿ ಅಲ್ಲಿ ಹೋಗಿ ಗ್ರಾ.ಪಂ ಅಧ್ಯಕ್ಷ, ಪಿಡಿಓ ಮತ್ತು ಇತರರು ಸೇರಿ ಟಾಸ್ಕ ಫೋಸರ್ು ರಚಿಸಿ ಬ್ಯಾರೇಜುಗಳ ಮೇಲೆ ನೀರು ಬರುತ್ತಿರುವದನ್ನು ಗಮನಿಸಿ ಪೋಲಿಸ ಇಲಾಖೆಯ ಸಹಕಾರದೊಂದಿಗೆ ಅದನ್ನು ತಡೆದಿದ್ದಾರೆ.

ಅದಲ್ಲದೆ ಇಂಡಿ ತಾಲೂಕಿನ ಚಿಕ್ಕಮಣೂರ ಹತ್ತಿರದ ಯಲ್ಲಮ್ಮ ದೇವಸ್ಥಾನ ನೀರು ವೀಕ್ಷಿಸಿದರು. 

ತಹಸೀಲ್ದಾರ ನಾಗಯ್ಯ ಹಿರೇಮಠ, ಸಿಪಿಐ ಮಹಾದೇವ ಶಿರಹಟ್ಟಿ, ಸಣ್ಣ ನೀರಾವರಿ ಎಇಇ ಸಿ.ಎಸ್. ಕರೂರ ಮತ್ತಿತರರು ಇದ್ದರು. 


ಸುದ್ದಿ ಓದಿ