ಇಂಡಿಯಲ್ಲಿ ಭೂಕಂಪನ ಸ್ಥಳಕ್ಕೆ ಅಧಿಕಾರಿಗಳ ಭೇಟಿ
ಇಂಡಿ: ರೇಲ್ವೆ ನಿಲ್ದಾಣ ಸಮೀಪ ಭೂಕಂಪನ ಆಗಿದೆ ಎಂದು ಶನಿವಾರ ಬೆಳಿಗ್ಗೆ 6:22 ಕ್ಕೆ ಜನ ಮನೆಯಿಂದ ಹೊರಗೆ ಬಂದರಲ್ಲದೆ ಭಯಭೀತರಾದರು.
ಸುದ್ದಿ ತಿಳಿದ ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ, ಕಂದಾಯ ನೀರೀಕ್ಷಕ ಬಸವರಾಜ ರಾಹೂರ, ಗ್ರಾಮ ಲೆಕ್ಕಾಧಿಕಾರಿ ಎಂ.ಆರ್. ರಾಠೋಡ ಸ್ಥಳಕ್ಕೆ ಭೇಟಿ ನೀಡಿದರು.
ಮಹಿಳೆಯರು ಮನೆಯಲ್ಲಿಯ ಸಾಮಾನು ಬಾಂಡೆ ಕೆಳಗೆ ಬಿದ್ದ, ಭೂಮಿ ಕಂಪಿಸಿದ ಅನುಭವ ಆಗಿರುವದಾಗಿ ತಿಳಿಸಿದರು.
ಅದರಂತೆ ಅಲ್ಲಿಯೇ ಸಮೀಪದ ಚಿಕ್ಕಬೇವನೂರ ಅಡವಿ ವಸ್ತಿತಲ್ಲಿಯೂ ಇದೇ ರೀತಿ ಅನುಭವ ಆಗಿದೆ ಎಂದು ಗ್ರಾ.ಪಂ ಸದಸ್ಯ ಸೋಮಣ್ಣ ಪ್ರಚಂಡಿ ಎಸಿ ಅವರ ಮುಂದೆ ತಮ್ಮ ಅನುಭವ ಹಂಚಿಕೊಂಡರು. ಅದಲ್ಲದೆ ನವಿಲು ಜೋರಾಗಿ ಅದೇ ವೇಳೆ ಕೂಗಿವೆ ಮತ್ತು 5 ರಿಂದ 6 ಸೆಕೆಂಡಿಗೆ ಭೂಮಿ ಕಂಪಿಸಿದೆ ಎಂದರು.
ಎಲ್ಲಿಯೂ ಹಾನಿಯಾದ ವರದಿ ಇಲ್ಲ.