ಇಂಡಿ

ಅಂಗವಿಕಲರಿಗೆ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಿಲ್ಲ: ವಾಲೀಕರ

ಅಂಗವಿಕಲರಿಗೆ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಿಲ್ಲ: ವಾಲೀಕರ

ಇಂಡಿ: ರಾಜ್ಯದ ಬಜೆಟ್‌ನಲ್ಲಿ ಅಂಗವಿಕಲರನ್ನು ಕಡೆಗೆಣೆಸುವದರೊಂದಿಗೆ ಯಾವುದೇ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಯಾವುದೇ ರೀತಿ ಸೌಲಭ್ಯಗಳನ್ನು ನೀಡದೆ ಸಂಪೂರ್ಣ ಕಡೆಗೆಣಿಸಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ವಾಲೀಕರ ಹೇಳಿದರು. 

ಭಾನುವಾರ ಪಟ್ಟಣದ ವಿಜಯಪೂರ ರಸ್ತೆಯ ಶರಣಪ್ಪ ಎಮ್ ಖೇಡ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರೆದ ಅಂಗವಿಕಲರ ಸಂಘದ ಮತ್ತು ಪಾಲಕರ ಸಭೆಯಲ್ಲಿ ಮಾತನಾಡಿದರು. 

ಸಂಘದ  ಜಿಲ್ಲಾಧ್ಯಕ್ಷ ವಿನೋದ ಖೇಡ  ಮಾತನಾಡುತ್ತಾ ಸರಕಾರದ ವಿವಿಧ ಇಲಾಖೆಯಲ್ಲಿ ಗುತ್ತಿಗೆಯ ಆಧಾರದ ಮೇಲೆ ನೇಮಕಾತಿಯನ್ನು ಮಾಡಿಕೊಳ್ಳುವಲ್ಲಿ ಅಂಗವಿಕಲರಿಗೆ ಅನ್ಯಾಯಮಾಡಿದೆ ಎಂದರು. ಜನ ಪ್ರತಿನಿಧಿಗಳು ತಮ್ಮ ವೇತನ ಹಾಗೂ ಇನ್ನೀತರ ಸೌಲಭ್ಯಗಳನ್ನು  ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ಮಾಡಿಕೊಂಡು ರಾಜ್ಯದಲ್ಲಿರುವ ಅಂಗವಿಕಲರಿಗೆ ಅನ್ಯಾಯ ಮಾಡಿದಂತಾಗಿದೆ ಎಂದರು.  

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಹಶೀಲ್ದಾರ ಮುಖಾಂತರ ಅಂಗವಿಕರಿಂದ ಮನವಿ ಕೊಡುವುದಾಗಿ ಸಭೆಯಲ್ಲಿ ನಿರ್ಣಯಿಸಿದರು.  2016ರರ ಕಾಯ್ದೆ ಜಾರಿಯಾಗದಕ್ಕೆ ಕಾರಣರಾದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಾರಣರು ಎಂದು ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಉಮರಾಣಿ ಕಿಡಿಕಾರಿದರು. 

ಸಭೆಯಲ್ಲಿ  ತಾಲೂಕಾ ಅಧ್ಯಕ್ಷ ಎಸ್‌.ಎಮ್‌. ಮಕಂದಾರ, ಉಪಾಧ್ಯಕ್ಷ ನಿಂಗರಾಜ ಬಿಸನಾಳ, ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ನಾಯ್ಕೋಡಿ, ಕಜಾಂಚಿ ಸುಮಯ್ಯ ಮೋಮಿನ, ಸಂಘಟನಾ ಕಾರ್ಯದರ್ಶಿ ಬಾಬು ಸಂಗೊಗಿ, ಈರಣ್ಣ ಡಂಗಿ, ರೇಖಾ ಕ್ಷತ್ರಿ, ವಿಠ್ಠಲ ಮೇಲಿನಕೇರಿ, ಸೋಮರಾಯ ಕಲ್ಮನಿ, ಪಾಂಡು ರಾಠೋಡ, ಕನ್ನಯ್ಯಸಿಂಗ್ ಹಜಾರೆ, ಪರಸುರಾಮ ಪುಜಾರಿ, ಪ್ರಕಾಶ ಐರೊಡಗಿ ಶಿಕ್ಷಕರು, ರಾಜು ಹಣಕಟ್ಟಿ ಶಿಕ್ಷಕರು, ಪ್ರಕಾಶ ಚಿಂಚಗೋಳ, ಸಾಗರ ಸಾವಳಗಿ, ವಾಹಿದ ದೇಸಾಯಿ, ಸಾಗರ ಕದಂಬ, ಸಂತೋಷ ಚವ್ಹಾಣ, ಬಾಬು ಪವರ, ಹಸಿನಾ ಬಿರಾದಾರ, ಅಪ್ಪು ಗಂಗಶೆಟ್ಟಿ, ವಿಕಾಸ ಖೇಡ, ಬಿಜೆಪಿ ಧುರಿಣ ಪಾಪು ಕಿತ್ತಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ಪೋಟೊ ಕ್ಯಾಪ್ಸನ್ 06 ಇಂಡಿ 02: ಶರಣಪ್ಪ ಎಮ್ ಖೇಡ  ಮಹಾವಿದ್ಯಾಲಯದಲ್ಲಿ ಕರೆದ ಅಂಗವಿಕಲರ ಸಂಘದ ಮತ್ತು ಪಾಲಕರ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ವಾಲೀಕರ ಮಾತನಾಡಿದರು. 


ಸುದ್ದಿ ಓದಿ