ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷರಾಗಿ ನಂದಾ ಗುನ್ನಾಪೂರ ನೇಮಕ
ಇಂಡಿ: ಇಂಡಿ ವಿಧಾನ ಸಭಾ ಮತಕ್ಷೇತ್ರದ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಹಿರೇಮಸಳಿ ಗ್ರಾಮದ ನಂದಾ ಗುನ್ನಾಪೂರ ಅವರನ್ನು ನೇಮಕ ಮಾಡಿದ ಜೆಡಿಎಸ್ ಅಧ್ಯಕ್ಷ ಬಿ.ಡಿ.ಪಾಟೀಲ ಭಾನುವಾರ ಇಂಡಿ ಪಟ್ಟಣದಲ್ಲಿರುವ ಜೆಡಿಎಸ್ ಕಾರ್ಯಾಲಯದಲ್ಲಿ ಆದೇಶ ಪತ್ರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ನಂದಾ ಗುನ್ನಾಪೂರ ಮಾತನಾಡಿ, ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುವದರ ಜೊತೆಗೆ ಇಂಡಿ ವಿಧಾನ ಸಭೆಯಲ್ಲಿ ಜೆಡಿಎಸ್ ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮಿಸುವದಾಗಿ ತಿಳಿಸಿದರು. ಕಳೆದ ಸಮ್ಮಿಸ್ರ ಸರ್ಕಾರದಲ್ಲಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು ರೈತರಿಗೆ ಮಾಡಿದ ಕೆಲಸಗಳನ್ನು ಮತ್ತು ಸಾಲಮನ್ನಾ ಅಲ್ಲದೇ ಅಲ್ಪಸಂಖ್ಯಾತರ, ಬಡವರ, ದೀನದಲಿತರ ಬಗ್ಗೆ ಕಾಳಜಿ ವಹಿಸಿ ಮಾಡಿರುವ ಕೆಲಸಗಳನ್ನು ಮತ್ತು ಇನ್ನಿತರ ನೀರಾವರಿ ಕೆಲಸಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವದಾಗಿ ಭರವಸೆ ನೀಡಿದರು.
ಮರೆಪ್ಪ ಗಿರಣಿವಡ್ಡರ, ಮಹಿಬೂಬ ಬೇವನೂರ, ನಿಯಾಜ್ ಅಗರಖೇಡ, ರವಿ ಶಿಂಧೆ, ಬಾಳು ರಾಠೋಡ, ಹಣಮಂತ ಹಿರೇಕುರುಬರ, ಜಕ್ಕು ಪಾಟೀಲ ಇದ್ದರು.