ಮೈಕ್ರೋ ಅಬ್ಸರ್ವರ ತರಬೇತಿ ಕಾರ್ಯಕ್ರಮ
ಬೈಲಹೊಂಗಲ 07: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿಯ ಹೊಸೂರ ರಸ್ತೆಯ ಸರಕಾರಿ ಪ್ರಥಮ ದರ್ಜೆ ಮಹಿಳಾ ವಿದ್ಯಾಲಯದಲ್ಲಿ ಸೋಮವಾರ ಬೈಲಹೊಂಗಲ ಉಪವಿಭಾಗ ಮಟ್ಟದ ಮೈಕ್ರೋ ಅಬ್ಸರ್ವರ ತರಬೇತಿ ಕಾರ್ಯಕ್ರಮ ಜರುಗಿತು.
ಎಎಲ್ಎಂಟಿ ತರಬೇತಿದಾರರಾದ ಬಸವರಾಜ ಭರಮನ್ನವರ, ರಾಮಕೃಷ್ಣ ಮಾದರ ಅವರು ವಿಭಾಗೀಯ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ವಿಧಾನ ಪರಿಷತ್ ಚುನಾವಣೆ ಮೈಕ್ರೋ ಅಬರ್ಸ್ವರ್ ಕುರಿತು ಮಾರ್ಮಿಕವಾಗಿ ತರಬೇತಿ ನೀಡಿದರು.
ಬೈಲಹೊಂಗಲ, ಕಿತ್ತೂರ, ಸವದತ್ತಿ, ರಾಮದುರ್ಗ, ಗೋಕಾಕ, ಮೂಡಲಗಿ ತಾಲೂಕಿನ ವಿವಿಧ ಇಲಾಖೆಯ ಸುಮಾರು 231 ಅಧಿಕಾರಿಗಳು ಮೈಕ್ರೋ ಅಬರ್ಸವ ರ ತರಬೇತಿ ಪಡೆದರು, ಚುನಾವಣೆ ವಿಷಯ ನಿರ್ವಾಹಕ ಎಂ.ಬಿ ಸಾರಾಪುರೆ ಹಾಗೂ ತಹಸೀಲ್ದಾರ ಕಚೇರಿ ಸಿಬ್ಬಂದಿ ವರ್ಗ ಇದ್ದರು.