ಅಹಿಂದ ಕರ್ನಾಟಕ ವತಿಯಿಂದ ನಗರದಲ್ಲಿ ಸಭೆ
ಲೋಕದರ್ಶನ ವರದಿ
ವಿಜಯಪುರ 17: ಅಹಿಂದ ಕರ್ನಾಟಕ ವತಿಯಿಂದ ಜಿಲ್ಲೆಯಲ್ಲಿ ಮುಂದಿನ ಸಂಘಟನೆ, ಜವಾಬ್ದಾರಿಗಳ ಹಂಚಿಕೆ ತರಬೇತಿಗೆ ದಿಕ್ಸೂಚಿಯಾಗಬಲ್ಲ ಸಭೆಯನ್ನು ದಿನಾಂಕ 18.11.2026 ಬುಧವಾರ ಬೆಳಗ್ಗೆ 10.30 ಗಂಟೆಗೆ ಅಂಬೇಡ್ಕರ್ ಸರ್ಕಲ್ ಎದುರಿಗೆ ಇರುವ ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿದೆ. ಈ ಸಭೆಯಲ್ಲಿ ಅಹಿಂದ ಕರ್ನಾಟಕ ರಾಜ್ಯ ನಾಯಕರು ಕೂಡ ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಜಿಲ್ಲೆಯ ಹಿರಿಯ ಕಾಂಗ್ರೇಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲೆಯ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ ಸಮುದಾಯಗಳ ಮುಖಂಡರು ಸಹ ಭಾಗವಹಿಸಲಿದ್ದು, ಆಸಕ್ತರು, ಸಮಾನ ಮನಸ್ಕರು ಈ ಸಭೆಯ ಸದುಪಯೋಗಪಡೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.